Bihar

ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ನಿತೀಶ್ ಕುಮಾರ್; ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ್ದು, ಮಹಾಘಟಬಂಧನ ಮೈತ್ರಿಕೂಟ ಸರ್ಕಾರ ಭದ್ರವಾಗಿದೆ.

ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತಿಗೆ ಮುನ್ನ ಆರ್ ಜೆಡಿ ನಾಯಕರಿಗೆ ಆಘಾತ: ಉದ್ಯೋಗ ಹಗರಣ ಸಂಬಂಧ ಸಿಬಿಐ ದಾಳಿ!
ಸಿಬಿಐ ಇಂದು ಬುಧವಾರ ಇಬ್ಬರು ಆರ್‌ಜೆಡಿ ಸಂಸದರಾದ ಅಶ್ಫಾಕ್ ಕರೀಮ್ ಮತ್ತು ಫೈಯಾಜ್ ಅಹ್ಮದ್ ಮತ್ತು ಪಕ್ಷದ ಎಂಎಲ್‌ಸಿ ಮತ್ತು ಬಿಸ್ಕೊಮೌನ್ ಅಧ್ಯಕ್ಷ ಸುನಿಲ್ ಸಿಂಗ್ ಅವರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ತಪಾಸಣೆ ನಡೆಸಿದೆ.

ಬಿಹಾರ: ರಾಜೀನಾಮೆ ನೀಡದ ವಿಧಾನಸಭಾ ಸ್ಪೀಕರ್ ವಿರುದ್ಧ 'ಅವಿಶ್ವಾಸ ನಿರ್ಣಯ' ಮಂಡಿಸಿದ ಆರ್ ಜೆಡಿ
ಬಿಹಾರ ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರ ವಿರುದ್ಧ ಆಡಳಿತಾರೂಢ ಆರ್‌ಜೆಡಿ ಸದಸ್ಯರು 'ಅವಿಶ್ವಾಸ ನಿರ್ಣಯ' ಮಂಡಿಸಿದೆ. ಆದರೂ ಸಿನ್ಹಾ ಅವರು ರಾಜೀನಾಮೆ ನೀಡದೇ ಹುದ್ದೆಗೆ ಅಂಟಿಕೊಂಡಿದ್ದಾರೆ.

ಬಿಹಾರ: ಸರ್ಕಾರಿ ಸಭೆಯಲ್ಲಿ ಲಾಲೂ ಹಿರಿಯ ಅಳಿಯ ಭಾಗಿ, ವಿವಾದಕ್ಕೆ ಸಿಲುಕಿದ ತೇಜ್ ಪ್ರತಾಪ್!
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪುತ್ರ ಹಾಗೂ ಬಿಹಾರದ ಪರಿಸರ ಮತ್ತು ಅರಣ್ಯ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಸರ್ಕಾರಿ ಸಭೆಯಲ್ಲಿ ಅವರ ಸೋದರ ಮಾವ ಶೈಲೇಶ್ ಕುಮಾರ್ ಭಾಗಿಯಾಗಿರುವ ಚಿತ್ರ ಸರ್ಕಾರವನ್ನು...

ರಜೆ ಮೇಲೆ ಊರಿಗೆ ಬಂದಿದ್ದ ಯೋಧನನ್ನು ಬೈಕ್‌ನಲ್ಲಿ ಬಂದು ಗುಂಡಿಟ್ಟು ಕೊಂದ ಇಬ್ಬರು!
ಇಂದು ಬೆಳಗ್ಗೆ ಪಾಟ್ನಾದ ಜನನಿಬಿಡ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ರಜೆ ಮೇಲೆ ಊರಿಗೆ ಬಂದಿದ್ದ ಯೋಧನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಶರಣಾಗಬೇಕಿದ್ದ ಅಪಹರಣ ಪ್ರಕರಣದ ಆರೋಪಿ ಈಗ ಬಿಹಾರ ಕಾನೂನು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ!
ಬಿಹಾರದ ನೂತನ ಕಾನೂನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕಾರ್ತಿಕೇಯ್ ಸಿಂಗ್ ಅವರು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನ್ಯಾಯಾಲಯ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದು, ಕಾನೂನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದಾರೆ.

ಬಿಹಾರ ಸಿಎಂ ನಿತೀಶ್ ಕುಮಾರ್ 2025ರಲ್ಲಿ ರಾಜಕೀಯದಿಂದ ಗೌರವಯುತವಾಗಿ ನಿರ್ಗಮಿಸುತ್ತಾರೆ ಎಂದು ಭಾವಿಸಿದ್ದೆವು: ಸುಶಿಲ್ ಮೋದಿ
ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ರಾಜಕೀಯ ಲೆಕ್ಕಾಚಾರ, ಯೋಜನೆಗಳನ್ನು ಗ್ರಹಿಸುವಲ್ಲಿ ಬಿಜೆಪಿ ಸೋತಿದೆ ಎಂದು ಒಪ್ಪಿಕೊಂಡಿರುವ ಬಿಜೆಪಿ, ಜೆಡಿಯು ನಾಯಕ 2025ರ ಹೊತ್ತಿಗೆ ಚುನಾವಣಾ ರಾಜಕೀಯದಿಂದ ಗೌರವಯುತವಾಗಿ ನಿರ್ಗಮಿಸುತ್ತಾರೆ ಎಂಬ ಲೆಕ್ಕಾಚಾರದಲ್ಲಿತ್ತು.

ನಿತೀಶ್ ಕುಮಾರ್ ನೇತೃತ್ವದ 'ಮಹಾಘಟಬಂಧನ್' ಸರ್ಕಾರಕ್ಕೆ 31 ಸಚಿವರ ಸೇರ್ಪಡೆ: ಸದ್ಯದಲ್ಲಿಯೇ ಖಾತೆ ಹಂಚಿಕೆ
ಬದಲಾದ ರಾಜಕೀಯ ವಿದ್ಯಮಾನದಲ್ಲಿ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದು ವಾರದ ನಂತರ ಮಂಗಳವಾರ ಅವರ ಸಂಪುಟಕ್ಕೆ 31 ಶಾಸಕರು ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. 'ಮಹಾಘಟಬಂಧನ್' ಸರ್ಕಾರದ ಮಂತ್ರಿಗಳಲ್ಲಿ ವಿಜಯ್ ಕುಮಾರ್ ಚೌಧರಿ, ತೇಜ್ ಪ್ರತಾಪ್ ಯಾದವ್ ಮತ್ತು ಅಲೋಕ್ ಮೆಹ್ತಾ ಸೇರಿದ್ದಾರೆ.

ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಶಾಸಕ ಸುಭಾಶ್ ಸಿಂಗ್ ಇನ್ನಿಲ್ಲ
ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಶಾಸಕ ಮತ್ತು ಬಿಹಾರದ ಮಾಜಿ ಸಚಿವ ಸುಭಾಶ್ ಸಿಂಗ್ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

