Corona Virus

ಚೀನಾದಿಂದ ಭಾರತಕ್ಕೆ 6.5 ಲಕ್ಷ ಕೊರೋನಾ ಮೆಡಿಕಲ್ ಕಿಟ್ ರವಾನೆ: ಭಾರತದ ರಾಯಭಾರಿ
ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಚೀನಾದಿಂದ 6.5 ಲಕ್ಷ ರ್ಯಾಪಿಡ್ ಮೆಡಿಕಲ್ ಟೆಸ್ಟ್ ಕಿಟ್ ರವಾನೆ ಮಾಡಲಾಗಿದೆ ಎಂದು ಚೀನಾದಲ್ಲಿರುವ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.

ಕೊರೋನಾ ವೈರಸ್ ನಿರೋಧಕ ಲಸಿಕೆಯಿಂದ ಮಾತ್ರ ಜಗತ್ತನ್ನು ಸಹಜ ಸ್ಥಿತಿಗೆ ತರಲು ಸಾಧ್ಯ: ವಿಶ್ವಸಂಸ್ಥೆ
ವಿಶ್ವಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ಪಡೆಯುತ್ತಿರುವ ಮಾರಕ ಕೊರೋನಾ ವೈರಸ್ ನಿಂದ ಜಗತ್ತನ್ನು ರಕ್ಷಿಸಿ ಮತ್ತೆ ಅದನ್ನು ಸಹಜ ಸ್ಥಿತಿಗೆ ತರಲು ಕೋವಿಡ್-19 ಲಸಿಕೆಯಿಂದ ಮಾತ್ರ ಸಾಧ್ಯ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

ಕೆಎಸ್ಆರ್ಟಿಸಿ ಸಿಬ್ಬಂದಿ ವೇತನ ಕಡಿತವಿಲ್ಲ: ಮೂರು ತಿಂಗಳ ಸಂಬಳ ಸರ್ಕಾರದಿಂದಲೇ ಪಾವತಿ
ಲಾಕ್ ಡೌನ್ ನಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳು ಆದಾಯವಿಲ್ಲದೇ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿ ಎದುರಾಗಿರುವ ಕಾರಣ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಯ ವೇತನವನ್ನು ಸರ್ಕಾರದಿಂದಲೇ ನೀಡಲು ನಿರ್ಧರಿಸಲಾಗಿದೆ.

ಕೊರೋನಾ ವೈರಸ್: ಕರ್ನಾಟಕದಲ್ಲಿ ಮತ್ತೆ 34 ಪಾಸಿಟಿವ್ ಪ್ರಕರಣ, ಸೋಂಕಿತರ ಸಂಖ್ಯೆ 313ಕ್ಕೆ ಏರಿಕೆ
ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಅರ್ಭಟ ಮುಂದುವರೆದಿದ್ದು ನಿನ್ನೆ ಒಂದೇ ದಿನ ರಾಜ್ಯದಲ್ಲಿ ಸುಮಾರು 34 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ವೈರಸ್ ಸೋಂಕಿತರ ಸಂಖ್ಯೆ 313ಕ್ಕೆ ಏರಿಕೆಯಾಗಿದೆ.

ಉತ್ಪಾದನೆ ದುಪ್ಪಟ್ಟು, ಸರಬರಾಜು ಕೂಡ ದುಪ್ಪಟ್ಟು; ಆದರೂ ಮೆಡಿಕಲ್ ಸ್ಟೋರ್ ಗಳಲ್ಲಿ HCQ ಕೊರತೆ!
ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಹೈಡ್ರೋಕ್ಸಿಕ್ಲೋರೋಕಿನ್ (Hydroxychloroquine-HCQ)ಗೆ ನಗರದಲ್ಲಿ ಭಾರಿ ಕೊರತೆ ಎದುರಾಗಿದೆ.

ಕೇಂದ್ರ, ರಾಜ್ಯಗಳ ಗೋದಾಮಿನಲ್ಲಿ ಸಾಕಷ್ಟು HCQ ದಾಸ್ತಾನಿದೆ!
ವಿಶ್ವಾದ್ಯಂತ ಮಾರಕ ಕೊರೋನಾ ಆರ್ಭಟ ಮುಂದುವರೆದಿರುವಂತೆಯೇ ಇತ್ತ ವೈರಸ್ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕಿನ್ (Hydroxychloroquine-HCQ) ಮಾತ್ರೆಗಳ ಸಾಕಷ್ಟು ದಾಸ್ತಾನಿದೆ ಎಂದು ಹೇಳಲಾಗಿದೆ.

ಮಾರಕ ಕೊರೋನಾಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ; ರಾಜ್ಯದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆ
ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಗೆ ಮತ್ತೊಂದು ಬಲಿಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿಲ್ಲ: ಸುರೇಶ್ ಕುಮಾರ್
ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿಲ್ಲ ಈ ಕುರಿತ ವರದಿಗಳು ಸುಳ್ಳು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್.ಸುರೇಶ್ಕುಮಾರ್ ಹೇಳಿದ್ದಾರೆ.

ಕೊರೋನಾ ವೈರಸ್: ಬೆಂಗಳೂರಿನ 38 ವಾರ್ಡ್ ಗಳನ್ನು ಹಾಟ್ಸ್ಪಾಟ್ ಎಂದು ಗುರುತಿಸಿದ ಬಿಬಿಎಂಪಿ
ಪ್ರಮುಖ ಬೆಳವಣಿಗೆಯಲ್ಲಿ ಅತ್ತ ಕೇಂದ್ರ ಸರ್ಕಾರ ದೇಶದ 170ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಘೋಷಿಸಿದ ಬೆನ್ನಲ್ಲೇ ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೂಡ ತನ್ನ ವ್ಯಾಪ್ತಿಯಲ್ಲಿ ಬರುವ ಬೆಂಗಳೂರಿನ 38 ವಾರ್ಡ್ ಗಳನ್ನು ಗಳನ್ನು ಹಾಟ್ಸ್ಪಾಟ್ ಎಂದು ಗುರುತಿಸಿದೆ.

