FIR

KPSC ನೇಮಕಾತಿ ಅಕ್ರಮ ಪ್ರಕರಣಕ್ಕೆ ಹೊಸ ತಿರುವು; ಪ್ರತ್ಯೇಕ FIR ದಾಖಲಿಸಲು ಪೊಲೀಸರು ಮುಂದು, ಎಲ್ಲಾ ಪ್ರಕರಣಗಳ ತನಿಖೆಯೂ SITಗೆ ಹಸ್ತಾಂತರ..!
ಹೈಕೋರ್ಟ್‌ಗೆ ಸಂಬಂಧಿಸಿದ ರಾಜ್ಯ ಸರ್ಕಾರಿ ಅಭಿಯೋಜಕರ ಕಚೇರಿಯಿಂದ ಕಾನೂನು ಸಲಹೆ ದೊರೆತ ಬಳಿಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

BMTCಗೆ ಬಿಡಿಭಾಗ ಪೂರೈಸುವ ನೆಪ, ನಕಲಿ ಬಿಲ್ ಸೃಷ್ಟಿಸಿ ₹4 ಕೋಟಿ ಗುಳುಂ; 21 ಮಂದಿ ವಿರುದ್ಧ FIR ದಾಖಲು
2021 ಮತ್ತು 2026ರ ನಡುವೆ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ. ಈ ಬಿಲ್‌ಗಳಲ್ಲಿ ಬಿಎಂಟಿಸಿಗೆ 2,820 ಬಿಡಿಭಾಗಗಳನ್ನು ಪೂರೈಸಿರುವುದಾಗಿ ನಮೂದಿಸಲಾಗಿದ್ದರೂ, ಯಾವುದೇ ಸಾಮಗ್ರಿಗಳನ್ನು ಪೂರೈಸಿಲ್ಲ ಎಂದು ದೂರಲಾಗಿದೆ.

ಬಸವಣ್ಣನವರಿಗೆ ಅವಮಾನ ಮಾಡಿದ ಆರೋಪ: 'ಬಸವ ಮಂಟಪ' ಪುಸ್ತಕದ ಲೇಖಕ, ಪ್ರಕಾಶಕರ ವಿರುದ್ಧ FIR ದಾಖಲು
ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ, ಇಬ್ಬರು ಹಾಗೂ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭಾರಿ ರಿಯಾಯಿತಿ ದರದಲ್ಲಿ ಸಿಸಿಟಿವಿಗಳನ್ನು ಪಡೆಯಲು PMO ಅಧಿಕಾರಿಯಂತೆ ನಟಿಸಿದ ವ್ಯಕ್ತಿ; FIR ದಾಖಲಿಸಿದ CBI
ಆರೋಪಿ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ 'ಜಂಟಿ ಕಾರ್ಯದರ್ಶಿ' ಹುದ್ದೆಯಲ್ಲಿದ್ದೇನೆ ಎಂದು ಸುಳ್ಳು ಹೇಳಿಕೊಂಡು, ಆ ಹುದ್ದೆಯ ಪ್ರಭಾವ ಬಳಸಿಕೊಂಡು ಸಿಸಿಟಿವಿ ಕಂಪನಿಯೊಂದರ ಮೇಲೆ ಒತ್ತಡ ಹೇರಿದ್ದಾನೆಂದು ಆರೋಪಿಸಲಾಗಿದೆ.

ನಿಗೂಢ ವಿದೇಶಿ ಪ್ರಜೆ: ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್; ಕಂಗನಾ ವಿರುದ್ಧ FIR ದಾಖಲು
ಸಂಬಂಧಿಕರನ್ನು ಒಬ್ಬರ ನಂತರ ಒಬ್ಬರಂತೆ ಕೊಲ್ಲಲಾಯಿತು. ಅಲ್ಲದೇ ಸಂಜಯ್ ಗಾಂಧಿಯವರ ಮರಣದ ನಂತರ, ಅವರ ಪತ್ನಿ ಮೇನಕಾ ಗಾಂಧಿಯವರನ್ನು ನಿವಾಸದಿಂದ ಹೊರಹಾಕಲಾಯಿತು ಎಂಬ ಹೇಳಿಕೆಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು: ಪೆರೋಲ್ ಅವಧಿ ಮುಗಿದರೂ ಜೈಲಿಗೆ ವಾಪಸಾಗದ ಕೈದಿ; ಇಬ್ಬರು ಶ್ಯೂರಿಟಿದಾರರ ವಿರುದ್ಧ FIR ದಾಖಲು..!
ಕೊಲೆ ಪ್ರಕರಣದ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಮತ್ತೊಂದು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಸಾಕ್ಷ್ಯ ನಾಶಪಡಿಸಿದ ಪ್ರಕರಣದ ಸೆಕ್ಷನ್ 201ರ ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು.

ಮನೆಗೆ ಚಾಕು ಪಾರ್ಸೆಲ್ ಪ್ರಕರಣ: FIR ದಾಖಲು; ಇಂತಹ ಬೆದರಿಕೆಗಳಿಗೆ ಬಗ್ಗುವವನೂ ಅಲ್ಲ, ಹೆದರುವವನೂ ಅಲ್ಲ ಎಂದ "ಛಲವಾದಿ"
ನನ್ನ ವಿಳಾಸಕ್ಕೆ ಚಾಕು, ಚೂರಿಗಳನ್ನು ಕಳುಹಿಸಿ ಬೆದರಿಸುವ ಮೂಲಕ ನನ್ನ ಧ್ವನಿಯನ್ನು ಅಡಗಿಸಬಹುದು ಎಂದು ಕಾಂಗ್ರೆಸ್ ಭಾವಿಸಿದ್ದರೆ ಅದು ಅವರ ಹಗಲುಗನಸು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ರಷ್ಯಾ ವಿದೇಶಾಂಗ ಸಚಿವರ ನಕಲಿ ವಿಡಿಯೋ ಶೇರ್: ಪ್ರಶಾಂತ್ ಭೂಷಣ್ ವಿರುದ್ಧ FIR ದಾಖಲು..!
ಈ ಬೆಳವಣಿಗೆಗೆ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಈ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಿತ್ತು. ವಿಡಿಯೊವನ್ನು ಡಿಜಿಟಲ್ ತಂತ್ರಜ್ಞಾನ ಬಳಸಿ ತಿರುಚಲಾಗಿದ್ದು, ಅದನ್ನು ಲಾವ್ರೊವ್ ಅವರಿಗೆ ತಪ್ಪಾಗಿ ಆರೋಪಿಸಲಾಗಿದೆ ಎಂದು ಸ್ಪಷ್ಟಪಡಿಸಿತ್ತು.

‘ಪತ್ನಿಯನ್ನು ಯೂಸ್ ಲೆಸ್, ಸ್ಟುಪಿಡ್ ಎಂದು ಕರೆಯುವುದು ಅಪರಾಧ ಎನಿಸುವ ಕ್ರೌರ್ಯವಲ್ಲ’: ಪತಿ ವಿರುದ್ಧ FIR ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ನಿನ್ನೆ ನವೆಂಬರ್ 2ರಂದು ನ್ಯಾಯಾಲಯ ಪಿಯೂಷ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿತು. 2025ರ ಜನವರಿ 8ರಂದು ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು.

