kalaburagi

ಕಲಬುರಗಿಗೆ ಪ್ರಧಾನಿ ಮೋದಿ ಆಗಮನ: ಗಣ್ಯರಿಂದ ಸ್ವಾಗತ
ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಲಬುರಗಿ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ್ದಾರೆ.

ಕಲಬುರಗಿ: ಟಾಯ್ಲೆಟ್ ಕ್ಲೀನಿಂಗ್ ಆಯ್ತು, ಮನೆಗೆಲಸಕ್ಕೂ ವಿದ್ಯಾರ್ಥಿಗಳ ಬಳಕೆ ಆರೋಪ; ಪೋಷಕರಿಂದ ದೂರು ದಾಖಲು
ಶಾಲೆಯ ಮಕ್ಕಳಿಂದ ಮುಖ್ಯ ಶಿಕ್ಷಕಿಯೊಬ್ಬರು ಶಾಲೆಯ ಹಾಗೂ ತಮ್ಮ ಮನೆಯ ಶೌಚಾಲಯ ಸ್ವಚ್ಚಗೊಳಿಸಿರುವ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದೆ.

ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಸಂಚರಿಸುತ್ತಿದ್ದ ಕಾರು ಪಲ್ಟಿ; ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು
ಭಾನುವಾರ ಕಲಬುರಗಿಯಲ್ಲಿ ನಡೆದ ಅಪಘಾತದಲ್ಲಿ ಬಿಜೆಪಿ ಶಾಸಕ ಬಸವರಾಜ್ ಮತ್ತಿಮಡು ಅವರು ಸಂಚರಿಸುತ್ತಿದ್ದ ಕಾರು ಪಲ್ಟಿಯಾಗಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಲಬುರಗಿ: ಮಹಿಳಾ ಪೊಲೀಸ್ ಪೇದೆಯ ಸಿಡಿಆರ್ ಸೋರಿಕೆ; ಇಬ್ಬರು ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಅಮಾನತು
ಕಲಬುರಗಿ ನಗರದಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರ ಕರೆ ವಿವರಗಳನ್ನು(ಸಿಡಿಆರ್) ಸೋರಿಕೆ ಮಾಡಿದ್ದಕ್ಕಾಗಿ ಮಹಿಳಾ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ಗಳನ್ನು ಬುಧವಾರ ಅಮಾನತುಗೊಳಿಸಲಾಗಿದೆ.

ಕಲಬುರಗಿ: ಸಹೋದ್ಯೋಗಿಗಳಿಂದಲೇ ಮಹಿಳಾ ಪೊಲೀಸ್ ಪೇದೆಯ ಸಿಡಿಆರ್ ಸೋರಿಕೆ, ಕಿರುಕುಳ ಪ್ರಕರಣ ದಾಖಲು
ಆಘಾತಕಾರಿ ಪ್ರಕರಣದಲ್ಲಿ, ಕಲಬುರಗಿ ನಗರದಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರ ಕರೆ ವಿವರಗಳ ವರದಿಯನ್ನು (ಸಿಡಿಆರ್) ಸಹ ಪೋಲೀಸರು ಆಕೆಗೆ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಗೆ ಸೋರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಲಬುರಗಿಯ ಅಫ್ಜಲ್ ಪುರದಲ್ಲಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲಿಯೇ ಸಾವು, ಒಬ್ಬರಿಗೆ ಗಾಯ
ಜಿಲ್ಲೆಯ ಅಫಜಲಪುರ ತಾಲೂಕಿನ ಹೊರವಲಯದ ನೀರಾವರಿ ಕಚೇರಿ ಬಳಿ ಕಳೆದ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರಗಿ ಕಡೆಯಿಂದ ಹೊರಟಿದ್ದ ಲಾರಿಗೆ ಜೀಪು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಕಲಬುರಗಿ: ಚಾಕು ತೋರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಅಪ್ರಾಪ್ತರು, ಮೊಬೈಲ್‌ನಲ್ಲಿ ಕೃತ್ಯ ಸೆರೆ
ಚಾಕು ತೋರಿಸಿ ಬೆದರಿಸಿ, 10 ವರ್ಷದ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರ ಎಸಗಿದ್ದು, ಕೃತ್ಯವನ್ನು ವಿಡಿಯೋ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ವರದಿಯಾಗಿದೆ.

ಕಲಬುರಗಿಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ: ಬೈಕ್ ಡಿಕ್ಕಿಯಾಗಿ ಕಾಂಗ್ರೆಸ್ ಎಂಎಲ್ಸಿ ತಾಯಿ ಸಾವು
ಕಲಬುರಗಿಯ ಸೇಡಂ ರಿಂಗ್ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರ ತಾಯಿ ಬಲಿಯಾಗಿದ್ದಾರೆ.

ಕಳಪೆ ಬೀಜ ಪೂರೈಕೆಯಿಂದ ಉದ್ದು ಬೆಳೆ ನಷ್ಟ: ದಶಕದ ನಂತರ ಕಲಬುರಗಿ ರೈತರಿಗೆ ಎಕರೆಗೆ 5 ಸಾವಿರ ರೂ. ಪರಿಹಾರ
ಸರ್ಕಾರಗಳ ಸತತ ನಿರ್ಲಕ್ಷ್ಯದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದಕ್ಕೆ ಕಲಬುರಗಿ ಜಿಲ್ಲೆಯ ರೈತರೇ ಸಾಕ್ಷಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ರೈತರು ಕರ್ನಾಟಕ ರಾಜ್ಯ ಬೀಜ ನಿಗಮ (ಕೆಎಸ್‌ಸಿಎಲ್) ಮೂಲಕ ಕೃಷಿ ಇಲಾಖೆಯು ಕಳಪೆ ಬೀಜಗಳನ್ನು ಪೂಕೈಕೆ ಮಾಡಿದ್ದರಿಂದ ಉಂಟಾದ ಉದ್ದು ಬೆಳೆ ನಷ್ಟಕ್ಕೆ ಪರಿಹಾರವನ್ನು ಪಡೆಯಲು ದಶಕಕ್ಕೂ ಹೆಚ್ಚು ಕಾಲ ಕಾಯ್ದಿದ್ದಾರೆ.

