Maharashtra

ಮಹಾರಾಷ್ಟ್ರದಲ್ಲಿ 'ದಹಿ ಹಂಡಿ'ಗೆ ಸಾಹಸ ಕ್ರೀಡೆ ಸ್ಥಾನಮಾನ; ಗಾಯಾಳುಗಳಿಗೆ ಪರಿಹಾರ
ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ಆಚರಿಸಲಾಗುವ ಮೇಲಿಟ್ಟ ಮೊಸರು ತುಂಬಿದ ಮಣ್ಣಿನ ಮಡಿಕೆ ಒಡೆವ 'ದಹಿ ಹಂಡಿ'ಗೆ ಸಾಹಸ ಕ್ರೀಡೆಯ ಸ್ಥಾನಮಾನ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ...

ರಾಯಘಡ ಬೀಚ್ ನಲ್ಲಿ ಪತ್ತೆಯಾದ ಶಂಕಿತ ಬೋಟ್ ಆಸಿಸ್ ಮಹಿಳೆಗೆ ಸೇರಿದ್ದು; ಭಯೋತ್ಪಾದಕ ಕೃತ್ಯ ಭಯ ಬೇಡ: 'ಮಹಾ' ಸರ್ಕಾರ
ಶಸ್ತ್ರಾಸ್ತ್ರಗಳ ಸಹಿತ ಮಹಾರಾಷ್ಟ್ರದ ರಾಯಘಡ ಬೀಚ್ ನಲ್ಲಿ ಪತ್ತೆಯಾಗಿದ್ದ ಶಂಕಿತ ವಿಹಾರ ಬೋಟ್ ಆಸ್ಟ್ರೇಲಿಯಾ ಮಹಿಳೆಗೆ ಸೇರಿದ್ದಾಗಿದ್ದು, ಭಯೋತ್ಪಾದಕ ಕೃತ್ಯ ಭಯ ಬೇಡ ಎಂದು ಮಹಾರಾಷ್ಟ್ರ ಸರ್ಕಾರ ಸ್ಪಷ್ಟಪಡಿಸಿದೆ.

ಮುಂಬೈ ದಾಳಿ ಮಾದರಿ ಉಗ್ರದಾಳಿಗೆ ಸಂಚು?; ಮಹಾರಾಷ್ಟ್ರದ ಬೀಚ್ ಬಳಿ ಸ್ಫೋಟಕ, ಬಂದೂಕುಗಳಿದ್ದ ಶಂಕಿತ ದೋಣಿ ಪತ್ತೆ
ಗಣೇಶೋತ್ಸವಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಮುಂಬೈ ದಾಳಿ ಮಾದರಿಗೆ ಉಗ್ರರು ಸಂಚು ರೂಪಿಸಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಇದಕ್ಕೆ ಕಾರಣ ಮಹಾರಾಷ್ಟ್ರದ ಬೀಚ್ ಬಳಿ ಸ್ಫೋಟಕ, ಬಂದೂಕುಗಳಿದ್ದ ಶಂಕಿತ ಬೋಟ್ ಪತ್ತೆಯಾಗಿದೆ.

ಶಿಂಧೆ ಸಂಪುಟದಲ್ಲಿ ಖಾತೆ ಹಂಚಿಕೆ: ಫಡ್ನವೀಸ್ ಪಾಲಾದ ಪ್ರಮುಖ ಖಾತೆಗಳು!
ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯ 5 ದಿನಗಳ ಬಳಿಕ ಖಾತೆ ಹಂಚಿಕೆ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಆಟೋ ರಿಕ್ಷಾಗೆ ಕಾರು ಡಿಕ್ಕಿ; 6 ಮಂದಿ ದುರ್ಮರಣ!
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಕಾರು ಮತ್ತು ಟೆಂಪೋ ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟಿರೋ ದಾರುಣ ಘಟನೆ ನಡೆದಿದೆ.

ಮಹಾರಾಷ್ಟ್ರ-ಕರ್ನಾಟಕ ನಡುವೆ ಸಾಮರಸ್ಯ ಬೆಳೆಯಬೇಕು: ಸಿಎಂ ಬೊಮ್ಮಾಯಿ
ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಬಂಧ ಬಹಳ ವರ್ಷಗಳದ್ದು. ನಮ್ಮ ಸಾಮರಸ್ಯ ಬೆಳೆಯಬೇಕು. ಮನಸ್ಸು ಒಂದಾದರೆ ಎಲ್ಲ ಸಾಧನೆ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರಾಗಿ ಬವಾಂಕುಳೆ, ಮುಂಬೈ ಘಟಕದ ಮುಖ್ಯಸ್ಥರಾಗಿ ಶೆಲಾರ್ ನೇಮಕ
ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರಾಗಿ ಚಂದ್ರಶೇಖರ ಬವಾಂಕುಳೆ ಮತ್ತು ಮುಂಬೈ ಘಟಕದ ಅಧ್ಯಕ್ಷರಾಗಿ ಆಶಿಶ್ ಶೆಲಾರ್ ಅವರನ್ನು ಶುಕ್ರವಾರ ನೇಮಕ ಮಾಡಲಾಗಿದೆ.

ಬರೋಬ್ಬರಿ 40 ದಿನಗಳ ನಂತರ ಏಕನಾಥ್ ಶಿಂಧೆ ಸಂಪುಟ ನಾಳೆ ವಿಸ್ತರಣೆ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬರೋಬ್ಬರಿ 40 ದಿನಗಳ ನಂತರ ಆಗಸ್ಟ್ 9 ರಂದು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲಿದ್ದಾರೆ ಎಂದು ಮುಖ್ಯಮಂತ್ರಿಯ ಆಪ್ತರು ಸೋಮವಾರ ತಿಳಿಸಿದ್ದಾರೆ.

ಮಹಾ ರಾಜ್ಯಪಾಲರನ್ನು ಮನೆಗೆ ಕಳುಹಿಸಬೇಕೋ, ಜೈಲಿಗೆ ಕಳುಹಿಸಬೇಕೋ ಎಂದು ನಿರ್ಧರಿಸುವ ಸಮಯ ಬಂದಿದೆ: ಉದ್ಧವ್ ಠಾಕ್ರೆ
ಗುಜರಾತಿಗಳು ಮತ್ತು ರಾಜಸ್ಥಾನಿಗಳು ತೆರಳಿದರೆ ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲ ಎಂಬ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ಹೇಳಿಕೆ ಶನಿವಾರ ಭಾರಿ ವಿವಾದಕ್ಕೆ ಕಾರಣವಾಗಿದ್ದು,...

