Russia, China

ವೈದ್ಯಕೀಯ ಕಿಟ್ ಮಾರುವ ದುರುದ್ದೇಶದಿಂದ ಕೊರೋನಾ ವೈರಸ್ ಮಾಹಿತಿ ಮರೆಮಾಚಿದ ಚೀನಾ?; ಅಮೆರಿಕ ಗುಪ್ತಚರ ವರದಿ
ಇಡೀ ಜಗತ್ತಿಗೆ ಸಾವಿನ ಭೀತಿ ಹುಟ್ಟಿಸಿರುವ ಮಾರಕ ಕೊರೋನಾ ವೈರಸ್ ಚೀನಾದಲ್ಲೇ ಹುಟ್ಟಿತು ಎಂಬ ವಾದ ಬಲವಾಗಿ ಕೇಳಿಬರುತ್ತಿರುವಂತೆಯೇ ಇತ್ತ ಚೀನಾ ತನ್ನ ವೈದ್ಯಕೀಯ ಕಿಟ್ ಗಳನ್ನು ಜಗತ್ತಿಗೆ ಮಾರುವ ದುರುದ್ದೇಶದಿಂದ ಕೊರೋನಾ ವೈರಸ್ ಕುರಿತ ಮಾಹಿತಿಯನ್ನು ಮರೆಮಾಚಿತು ಎಂಬ ಗಂಭೀರ ಆರೋಪವನ್ನು ಅಮೆರಿಕ ಗುಪ್ತಚರ ಇಲಾಖೆ ನೀಡಿದೆ.

ಕೊರೋನಾ ವುಹಾನ್'ನಿಂದ ಬಂದಿದೆ ಎನ್ನಲು ನಮ್ಮ ಬಳಿ ಸಾಕ್ಷ್ಯವಿದೆ: ಅಮೆರಿಕಾ
ಕೊರೋನಾ ವೈರಸ್ ಉಗಮ ಸ್ಥಾನ ವುಹಾನ್ ವನ್ಯಜೀವಿ ಮಾಂಸ ಮಾರುಕಟ್ಟೆಯಲ್ಲ, ಅದೇ ವುಹಾನ್'ನ ವೈರಾಣು ಲ್ಯಾಬ್ ಎಂದು ಹೇಳಲು ನಮ್ಮ ಬಳಿ ಸಾಕ್ಷ್ಯವಿದೆ ಎಂದು ಅಮೆರಿಕಾ ಹೇಳಿದೆ.

ಟ್ರಂಪ್ ಟೀಕೆ ಬೆನ್ನಲ್ಲೇ ಮಹಾಮಾರಿ ಕೊರೋನಾ ನಿಭಾಯಿಸಿದ್ದಕ್ಕಾಗಿ ಚೀನಾವನ್ನು ಪ್ರಶಂಸಿಸಿದ ವಿಶ್ವ ಆರೋಗ್ಯ ಸಂಸ್ಥೆ!
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಚೀನಾದ ಪಿಆರ್ಏಜೆನ್ಸಿ(ಸಾರ್ವಜನಿಕ ಸಂಪರ್ಕ ಸಂಸ್ಥೆ) ಮಾದರಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ನಾಚಿಕೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಬೆನ್ನಲ್ಲೇ ಕೊರೋನಾ ನಿಭಾಯಿಸಿದ್ದಕ್ಕಾಗಿ ಚೀನಾವನ್ನು ಡಬ್ಲ್ಯೂಎಚ್ಒ ಪ್ರಶಂಸಿಸಿದೆ.

ಚೀನಾದ ಸಾರ್ವಜನಿಕ ಸಂಪರ್ಕ ಸಂಸ್ಥೆಯಂತೆ ವರ್ತಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಗೆ ನಾಚಿಕೆಯಾಗಬೇಕು:ಡೊನಾಲ್ಡ್ ಟ್ರಂಪ್
ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಅದು ಚೀನಾ ದೇಶದ ಸಾರ್ವಜನಿಕ ಸಂಪರ್ಕ ಸಂಸ್ಥೆಯ ರೀತಿ ವರ್ತಿಸುತ್ತಿದೆ, ಅದಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಿದ್ದಾರೆ.

ಜಗತ್ತಿನ ವಿಶ್ವಾಸ ಕಳೆದುಕೊಂಡ ಚೀನಾ: ಕೊರೋನಾ ನಿಯಂತ್ರಣದಲ್ಲಿ ಮೆಚ್ಚುಗೆ ಪಡೆದ ಭಾರತ: ಸಂತೋಷ್
ಬೆಂಗಳೂರು: ಚೀನಾ ದೇಶ ಪ್ರಪಂಚದಾದ್ಯಂತ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಹೀಗಾಗಿ ಅನೇಕ ದೊಡ್ಡ ಹೂಡಿಕೆ ಸಂಸ್ಥೆಗಳು ಆ ದೇಶದಿಂದ ಹೊರಬರುವ ಸಾಧ್ಯತೆಯಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.

ನಿಮ್ಮಿಂದಾಗಿ ನಮಗೆ ಭಾರೀ ನಷ್ಟವಾಗಿದೆ, ಅದನ್ನು ತುಂಬಿಕೊಡಿ, ತನಿಖೆ ನಡೆಸುತ್ತೇವೆ: ಚೀನಾ ವಿರುದ್ಧ ಅಮೆರಿಕ ಆಕ್ರೋಶ
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಅಪಾರ ಪ್ರಮಾಣದ ಸಾವು-ನೋವು, ನಷ್ಟಗಳಿಂದ ಮೊದಲ ಬಾರಿಗೆ ವೈರಸ್ ಹಬ್ಬಿಸಿದ ಚೀನಾ ವಿರುದ್ಧ ತೀವ್ರ ಆಕ್ರೋಶಕ್ಕೀಡಾಗಿರುವ ಅಮೆರಿಕಾ ಚೀನಾ ವಿರುದ್ಧ ತನಿಖೆ ಆರಂಭಿಸುವುದಾಗಿ ಹೇಳಿದೆ.

ಕೋವಿಡ್-19 ಪರೀಕ್ಷಾ ಕಿಟ್ ಗಳಿಗೆ ದೋಷಯುಕ್ತ ಹಣೆಪಟ್ಟಿ ಹಚ್ಚುವುದು ಅನ್ಯಾಯ- ಚೀನಾ
ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಭಾರತವನ್ನು ಚೀನಾ ಪ್ರಾಮಾಣಿಕವಾಗಿ ಬೆಂಬಲಿಸುತ್ತಿದ್ದು, ಸಹಾಯ ಒದಗಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದಿರುವ ಭಾರತದಲ್ಲಿನ ಚೀನಾ ರಾಯಭಾರ ಕಚೇರಿ, ಚೀನಾದ ಉತ್ಪನ್ನಗಳನ್ನು ದೋಷಪೂರಿತ ಎಂಬ ದೂರುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ದುಪ್ಪಟ್ಟು ಬೆಲೆಗೆ ಟೆಸ್ಟ್ ಕಿಟ್ ಖರೀದಿ ವಿವಾದ ಬೆನ್ನಲ್ಲೇ ಚೀನಾ ಟೆಸ್ಟಿಂಗ್ ಕಿಟ್ ಆರ್ಡರ್ ರದ್ದುಪಡಿಸಿದ ಭಾರತ
ದುಪ್ಪಟ್ಟು ಬೆಲೆಗೆ ರ್ಯಾಪಿಡ್ ಟೆಟ್ಸ್ ಕಿಟ್ ಖರೀದಿ ಮಾಡಿರವ ವಿವಾದ ಬೆನ್ನಲ್ಲೇ ಈಗಾಗಲೇ ಚೀನಾ ಕಂಪನಿಯಿಂದ ರ್ಯಾಪಿಡ್ ಟೆಸ್ಟಿಂಗ್ ಕಿಟ್ಸ್ ಗಳ ಖರೀದಿ ಆರ್ಡರ್'ನ್ನು ಭಾರತ ಸಂಪೂರ್ಣವಾಗಿ ರದ್ದುಪಡಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ.

ದುಬಾರಿ ಬೆಲೆಗೆ ಚೀನಾ ಕೋವಿಡ್-19 ಟೆಸ್ಟ್ ಕಿಟ್ ಗಳನ್ನು ಖರೀದಿಸಿದ ಭಾರತ: ನ್ಯಾಯಾಂಗ ಹೋರಾಟದಲ್ಲಿ ಬಹಿರಂಗ
ಮಹಾಮಾರಿ ಕೊರೋನಾವೈರಸ್ ನಿಯಂತ್ರಣಕ್ಕಾಗಿ ಭಾರತ ದುಬಾರಿ ಬೆಲೆ ನೀಡಿ ಚೀನಾದ ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಖರೀದಿಸಿರುವುದು ತಿಳಿದುಬಂದಿದೆ. ಆದರೆ, ದೋಷಪೂರಿತ ಫಲಿತಾಂಶದಿಂದಾಗಿ ಅನೇಕ ರಾಜ್ಯಗಳಲ್ಲಿ ಅವುಗಳನ್ನು ಬಳಸದೆ ಹಾಗೆಯೇ ಇಡಲಾಗಿದೆ.

