Tamil Nadu

ಮೇಕೆದಾಟು ಯೋಜನೆ ಕುರಿತ ತಮಿಳುನಾಡಿನ ರಾಜಕಾರಣ ಸರಿಯಲ್ಲ: ಸಿಎಂ ಬೊಮ್ಮಾಯಿ
ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಈ ವಿಚಾರದಲ್ಲಿ ತಮಿಳುನಾಡು ಮಾಡುತ್ತಿರುವ ರಾಜಕಾರಣ ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ತೀವ್ರವಾಗಿ ಕಿಡಿಕಾರಿದ್ದಾರೆ.

ವೀಕೆಂಡ್ ಕರ್ಫ್ಯೂ: ಕೇರಳ, ತಮಿಳುನಾಡು ಗಡಿಗಳಲ್ಲಿ ನೂರಾರು ಪ್ರಯಾಣಿಕರ ಸಂಕಷ್ಟ
ಕೊರೋನಾ ಸೋಂಕು ಭೀತಿಯಿಂದಾಗಿ ಸರ್ಕಾರ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹೇರಿದ್ದು, ಇದರ ಪರಿಣಾಮ ಕರ್ನಾಟಕ-ತಮಿಳುನಾಡು ಹಾಗೂ ಕರ್ನಾಟಕ-ಕೇರಳ ಗಡಿಗಳಲ್ಲಿ ನೂರಾರು ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿತ್ತು.

ನಮ್ಮ ಸಹಕಾರವಿದೆ, ತಡ ಮಾಡದೆ ಮೇಕೆದಾಟು ಯೋಜನೆ ಆರಂಭಿಸಿ: ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್
ಮೇಕೆದಾಟು ಯೋಜನೆಗೆ ನಾವು ಸಹಕಾರ ನೀಡುತ್ತೇವೆ. ತಡ ಮಾಡದೆ ಸರ್ಕಾರ ಯೋಜನೆ ಆರಂಭಿಸಲಿ ಎಂದು ರಾಜ್ಯ ಕಾಂಗ್ರೆಸ್ ಶನಿವಾರ ಹೇಳಿದೆ.

ಯಾರೇ ಊಟ ಬಿಟ್ಟರೂ ನಾವು ಮೇಕೆದಾಟು ಬಿಡಲ್ಲ: ತ.ನಾಡು ಅಣ್ಣಾಮಲೈ ಉಪವಾಸ ಸತ್ಯಾಗ್ರಹಕ್ಕೆ ಸಿಎಂ ಬೊಮ್ಮಾಯಿ ತೀಕ್ಷ್ಣ ಪ್ರತಿಕ್ರಿಯೆ
ಮೇಕೆದಾಟಿನಲ್ಲಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟೆಯನ್ನು ವಿರೋಧಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಉಪವಾಸ ಸತ್ಯಾಗ್ರ ನಡೆಸುವುದಾಗಿ ಹೇಳಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶನಿವಾರ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ಯಾವುದೇ ನಿರ್ಬಂಧ ಸಡಿಲಿಕೆ ಇಲ್ಲ, ಆಗಸ್ಟ್ 9ರ ವರೆಗೆ ಲಾಕ್ಡೌನ್ ವಿಸ್ತರಣೆ
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಶುಕ್ರವಾರ ಯಾವುದೇ ಕೋವಿಡ್ ನಿರ್ಬಂಧಗಳನ್ನು ಸಡಿಲಿಕೆ ಮಾಡದೇ ರಾಜ್ಯದಲ್ಲಿ ಲಾಕ್ಡೌನ್ ಅನ್ನು ಆಗಸ್ಟ್ 9 ರವರೆಗೆ ವಿಸ್ತರಿಸಿದ್ದಾರೆ.

ಮತ್ತಷ್ಟು ಕಾವೇರಿ ನೀರು ಬಳಕೆಗೆ ತಮಿಳುನಾಡು ಪ್ಲಾನ್: ರಾಜ್ಯದ ಆಕ್ಷೇಪ; ಸುಪ್ರೀಂ ಕೋರ್ಟ್ ಗೆ ಕರ್ನಾಟಕ ಅರ್ಜಿ
ಕಾವೇರಿ ಕೊಳ್ಳದಲ್ಲಿ ಹೆಚ್ಚುವರಿ ಲಭ್ಯವಿರುವ 91 ಟಿಎಂಸಿ ಅಡಿ ನೀರಿನ ಮೇಲೆ ಹಕ್ಕು ಪ್ರತಿಪಾದಿಸಿರುವ ಕರ್ನಾಟಕ ರಾಜ್ಯವು, ತಮಿಳುನಾಡು ಸರ್ಕಾರ ಯೋಜಿಸಿರುವ ಕಾವೇರಿ-ವೈಗೈ-ಗುಂಡರ್ ಸರಪಳಿ ನೀರಾವರಿ ಯೋಜನೆಯನ್ನು ವಿರೋಧಿಸಿದೆ.

ಮೇಕೆದಾಟು ಯೋಜನೆ ತಮಿಳುನಾಡಿನೊಂದಿಗಿನ ಸಹೋದರ ಸಂಬಂಧವನ್ನು ಬಲಪಡಿಸುತ್ತದೆ: ಬಿಎಸ್ವೈ
ಮೇಕೆದಾಟು ಯೋಜನೆಯು ನೆರೆರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಹೇಳಿದ್ದಾರೆ. ಕರ್ನಾಟಕ ಪ್ರಸ್ತಾಪಿಸಿದ ಮೇಕೆದಾಟು ಯೋಜನೆ ಕುರಿತು ತಮಿಳುನಾಡಿನ ಸರ್ವಪಕ್ಷಗಳ ನಿಯೋಗ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ದೆಹಲಿಯಲ್ಲಿ ಭೇಟಿಯಾದ ಒಂದು ದಿನದ ನಂತರ ಅವರ ಹೇಳಿಕೆ ಹೊರಬಿದ್ದಿದೆ.

ಇದೇ ಮೊದಲು: ಕಾಡಾನೆ ರಿವಾಲ್ಡೊವನ್ನು ಮತ್ತೆ ಕಾಡಿಗೆ ಬಿಡಲು ತಮಿಳುನಾಡು ಅರಣ್ಯ ಇಲಾಖೆ ನಿರ್ಧಾರ!
ತಮಿಳುನಾಡಿನಲ್ಲಿ ಮೊದಲ ಬಾರಿಗೆ ಮೂರು ತಿಂಗಳ ಕಾಲ ಸೆರೆಹಿಡಿದು ಕ್ರಾಲ್ ಒಳಗೆ ಹಾಕಿದ್ದ ಕಾಡಾನೆಯನ್ನು ಮತ್ತೆ ಕಾಡಿಗೆ ಬಿಡಲು ಮಾಡಲಾಗುವುದು. ನೀಲಗಿರಿಯಲ್ಲಿ ಜನಪ್ರಿಯ ಏಷ್ಯಾಟಿಕ್ ಆನೆಗೆ ಸ್ವಾತಂತ್ರ್ಯ ನೀಡಲು ರಾಜ್ಯ ಅರಣ್ಯ ಇಲಾಖೆ ನಿರ್ಧರಿಸಿದೆ.

ತಮಿಳುನಾಡು: ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಕೊಂದ ಮಹಿಳೆ, ಐಪಿಸಿ ಸೆಕ್ಷನ್ 100ರ ಅಡಿಯಲ್ಲಿ ಬಿಡುಗಡೆ!
ಅತ್ಯಾಚಾರ ಯತ್ನದಿಂದ ತನ್ನನ್ನು ರಕ್ಷಿಸಿಕೊಳ್ಳಲು ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿದ್ದ 23 ವರ್ಷದ ಯುವತಿಯನ್ನು ಆತ್ಮರಕ್ಷಣೆ ಎಂಬ ಕಾರಣಕ್ಕೆ ಪೊಲೀಸರು ಅವಳನ್ನು ಬಿಟ್ಟು ಕಳುಹಿಸಿದ್ದಾರೆ.

