US, UK, France

ಕೊರೋನಾಗೆ ಅಮೆರಿಕಾ ಕಂಗಾಲು: 24 ಗಂಟೆಗಳಲ್ಲಿ 1,738 ಮಂದಿಯನ್ನು ಬಲಿ ಪಡೆದ ಮಹಾಮಾರಿ
ರಾಷ್ಟ್ರದಲ್ಲಿ ಕೊರೋನಾ ಮೆರೆಯುತ್ತಿರುವ ಅಟ್ಟಹಾಸವನ್ನು ಹುಟ್ಟುಹಾಕುವಲ್ಲಿ ಅಮೆರಿಕಾ ಹರಸಾಹಸಪಡುತ್ತಿರುವ ನಡುವಲ್ಲೇ ಮಹಾಮಾರಿ ವೈರಸ್ 24 ಗಂಟೆಗಳಲ್ಲಿ 1,738 ಮಂದಿಯನ್ನು ಬಲಿಪಡೆದುಕೊಂಡಿದೆ.

ಅಮೆರಿಕದ ಥಿಯೋಡರ್ ರೂಸ್ವೆಲ್ಟ್ ನೌಕೆಗೂ ತಟ್ಟಿದ ಕೊವಿಡ್-19: 700 ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು
ಗುವಾಮ್‌ನಲ್ಲಿ ಲಂಗರು ಹಾಕಿರುವ ಪರಮಾಣು ಇಂಧನ ಚಾಲಿತ ವಿಮಾನ ಹೊತ್ತೊಯ್ಯವ ನೌಕೆಯಾದ ಯುಎಸ್‌ಎಸ್ ಥಿಯೋಡರ್ ರೂಸ್‌ವೆಲ್ಟ್‌ನ ಕನಿಷ್ಠ 710 ಸಿಬ್ಬಂದಿಯಲ್ಲಿ ಕೊವಿಡ್-19 ಸೋಂಕು ದೃಢಪಟ್ಟಿದೆ ಎಂದು ಅಮೆರಿಕ ನೌಕಾಪಡೆ ತಿಳಿಸಿದೆ.

ಅಮೆರಿಕಾದಲ್ಲಿ ಕೊರೋನಾ ರುದ್ರತಾಂಡವ: 24 ಗಂಟೆಗಳಲ್ಲಿ 2,700 ಮಂದಿ ಬಲಿ
ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ತನ್ನ ರುದ್ರತಾಂಡವವನ್ನು ಮುಂದುವರೆಸಿದ್ದು, 24 ಗಂಟೆಗಳಲ್ಲಿ 2,700 ಮಂದಿಯನ್ನು ಬಲಿ ಪಡೆದುಕೊಂಡಿದೆ.

ಭಾರತ ಸೇರಿ ಇತರೆ 9 ರಾಷ್ಟ್ರಕ್ಕಿಂತಲೂ ಕೊರೋನಾ ಪರೀಕ್ಷೆಯಲ್ಲಿ ಅಮೆರಿಕಾ ಮುಂದು: ಟ್ರಂಪ್
ಭಾರತ ಸೇರಿ ಇತರೆ ವಿಶ್ವದ ಇತರೆ 9 ರಾಷ್ಟ್ರಗಳಿಗಿಂತಲೂ ಕೊರೋನಾ ವೈರಸ್ ಪರೀಕ್ಷೆಯನ್ನು ಅಮೆರಿಕಾ ಹೆಚ್ಚಾಗಿ ನಡೆಸಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕಾಗೆ ಕೊರೋನಾಘಾತ: 24 ಗಂಟೆಗಲಲ್ಲಿ 1,891 ಮಂದಿ ಬಲಿ, 732,197 ಜನರಲ್ಲಿ ಸೋಂಕು ಪತ್ತೆ
ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಹೊಂದಿರುವ ಅಮೆರಿಕಾದಲ್ಲಿ ಮಹಾಮಾರಿ ಕೊರೋನಾ ವೈರಸ್ ಎಡೆಬಿಡದೆ ಕಾಡುತ್ತಿದ್ದು, ಕಳೆದ 24 ಗಂಟೆಗಳಲ್ಲಿ 1,891 ಮಂದಿ ವೈರಸ್'ಗೆ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ವಿಶ್ವದೆಲ್ಲೆಡೆ ಕೊರೋನಾ ರೌದ್ರ ನರ್ತನ: ಸಾವಿನ ಸಂಖ್ಯೆ 1.53 ಲಕ್ಷಕ್ಕೆ ಏರಿಕೆ, ಅಮೆರಿಕಾ ಒಂದರಲ್ಲೇ 7 ಲಕ್ಷ ಮಂದಿಗೆ ಸೋಂಕು
ಚೀನಾದಲ್ಲಿ ಹುಟ್ಟಿ ವಿಶ್ವದ 200ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿ ಸಾವಿನ ಬಲೆಯನ್ನೇ ಬೀಸಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕು ದಿನೇ ದಿನೇ ಸಾಕಷ್ಟು ವೇಗದಲ್ಲಿ ಹರಡುತ್ತಿದ್ದು, ಈ ವರೆಗೂ 1.53 ಲಕ್ಷ ಮಂದಿಯನ್ನು ಬಲಿಪಡೆದುಕೊಂಡಿದೆ.

ಕೊರೋನಾ ವಿರುದ್ಧ ಅಸಹಾಯಕ ಹೋರಾಟ: ಬ್ರಿಟನ್ ಆಸ್ಪತ್ರೆಯಲ್ಲಿ ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿರುವ ಭಾರತೀಯ ವೈದ್ಯ
ಇಡೀ ವಿಶ್ವಕ್ಕೆ ಕಂಟಕವಾಗ ಪರಿಣಮಿಸಿರುವ ಕೊರೋನಾ ವೈರಸ್ ವಿರುದ್ಧ ಬ್ರಿಟನ್ ಆಸ್ಪತ್ರೆಗಳಲ್ಲಿ ಭಾರತೀಯ ಮೂಲದ ವೈದ್ಯರು ಹಗಲು ರಾತ್ರಿ ಎನ್ನದೆ ಸೋಂಕಿತರಿಗೆ ಚಿಕಿತ್ಸೆ ನೀಡಿ, ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ವಿಶ್ವವನ್ನೇ ಬೆಚ್ಚಿ ಬೀಳಿಸುತ್ತಿದೆ ಕೊರೋನಾ ತೀವ್ರತೆ: ಸೋಂಕಿತರ ಸಂಖ್ಯೆ 21.5 ಲಕ್ಷಕ್ಕೆ ಏರಿಕೆ, ಸಾವಿನ ಸಂಖ್ಯೆ 143,844ಕ್ಕೆ ಏರಿಕೆ
ಚೀನಾದಲ್ಲಿ ಹುಟ್ಟಿ ವಿಶ್ವದ 200ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿ ಸಾವಿನ ಬಲೆಯನ್ನೇ ಬೀಸಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕು ದಿನೇ ದಿನೇ ಆದೆಷ್ಟು ವೇಗದಲ್ಲಿ ಹರಡುತ್ತಿದೆ ಎಂಬುದಕ್ಕೆ ಇದೀಗ ಮತ್ತೊಂದು ಉದಾಹರಣೆ ಲಭಿಸಿದೆ.

ಚೀನಾ ಲ್ಯಾಬ್ ನಲ್ಲಿ ಸೃಷ್ಟಿಯಾಯ್ತಾ ಕೊರೋನಾ ವೈರಸ್: ಅಮೆರಿಕ ತನಿಖೆ ಪ್ರಾರಂಭ!
ಕೊರೋನಾ ವೈರಸ್ ನ ಮೂಲ ಇಂದಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಈ ನಡುವೆ ಕೊರೋನಾ ವೈರಸ್ ವುಹಾನ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆಯೋ ಅಥವಾ ಬೇರೆ ಮೂಲಗಳಿಂದ ಹರಡಿದೆಯೋ ಎಂಬುದನ್ನು ತಿಳಿಯಲು ತಮ್ಮ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

