ಮನರಂಜನೆ

ಹೇಟ್‌ ಸ್ಟೋರಿ 3 ಚಿತ್ರದ ಟ್ರೈಲರ್

ಬಾಲಿವುಡ್‌ನಲ್ಲಿ ತೆರೆ ಕಂಡ ಬೋಲ್ಡ್‌ ಚಿತ್ರಗಳ ಸಿರೀಸ್‌ ಹೇಟ್‌ ಸ್ಟೋರಿಯ ಮತ್ತೊಂದು ಭಾಗ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದ ಒಂದು ಹಾಡಿನಲ್ಲಿ ಜರೀನ ಸಖತ್‌ ಹಾಟ್‌ ಆಗಿಯೇ ಕಾಣಿಸಿಕೊಂಡಿದ್ದಾರೆ.

ಹೇಟ್‌ ಸ್ಟೋರಿ 3 ಚಿತ್ರದ ಟ್ರೈಲರ್
'ಬಾಜಿರಾವ್ ಮಸ್ತಾನಿ' ಸಿನೆಮಾದ ದಿವಾನಿ ಮಸ್ತಾನಿ ಹಾಡಿನ ವಿಡಿಯೋ

'ಬಾಜಿರಾವ್ ಮಸ್ತಾನಿ' ಸಿನೆಮಾದ ದಿವಾನಿ ಮಸ್ತಾನಿ ಹಾಡಿನ ವಿಡಿಯೋ

ಮರಾಠಿ ರಾಜನೊಬ್ಬನ ಪ್ರೇಮಕಥೆ ಆಧಾರಿತ ಐತಿಹಾಸಿಕ ಸಿನೆಮಾ 'ಬಾಜಿರಾವ್ ಮಸ್ತಾನಿ' ಸಿನೆಮಾದ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ. ವೈಭವಯುತ ಸೆಟ್ ಹಾಕುವುದರಲ್ಲಿ ಪರಿಣಿತರಾದ ಸಂಜಯ್ ಈ ಸಿನೆಮಾಗೆ ಸಂಗೀತವನ್ನು ಕೂಡ ನಿರ್ದೇಶಿಸಿದ್ದಾರೆ. ಈ ಸಿನೆಮಾದ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಹೆಜ್ಜೆ ಹಾಕಿರುವುದನ್ನು ಇಲ್ಲಿ ನೋಡಬಹುದು. ನೆನ್ನೆಯಷ್ಟೇ ಬಿಡುಗಡೆಯಾದ ಈ ವಿಡಿಯೋವನ್ನು ೧ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿರುವುದು ಕುತೂಹಲ.

ಮೈಸೂರಿನ ಮಿತ್ರರಿಂದ ಬಾರಿಸು ಕನ್ನಡ ಡಿಂಡಿಮವ...

ಮೈಸೂರಿನ ಮಿತ್ರರಿಂದ ಬಾರಿಸು ಕನ್ನಡ ಡಿಂಡಿಮವ...

ಜನಜಂಗುಳಿಯಲಿ ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಯುವಪೀಳಿಗೆಯ ಆಕಸ್ಮಿಕ ಅನುಸಂಧಾನಕುವೆಂಪು ಅವರ ಪ್ರಸಿದ್ಧ ಗೀತೆ - ಬಾರಿಸು ಕನ್ನಡ ಡಿಂಡಿಮವ... ಗೀತೆಯನ್ನು ಹೊಸತಾಗಿ ಪ್ರಸ್ತುತ ಪಡಿಸಿದ್ದಾರೆ ಲೂಸಿಯಾ ಚಿತ್ರದಿಂದ ಖ್ಯಾತರಾದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ಕರ್ನಾಟಕ ಸರ್ಕಾರ ವಾರ್ತಾ ಇಲಾಖೆ ನಿರ್ಮಿಸಿರುವ ಈ ಹಾಡನ್ನು ನಿರ್ದೇಶಿಸಿದ್ದು ಸುನಿಲ್ ಆರ್. ಮೈಸೂರಿನ ಈ ಮಿತ್ರರು ಮಾಡಿರುವ ಈ ಪ್ರಯತ್ನವನ್ನು ಸಾಮಾಜಿಕ ತಾಣಗಳಲ್ಲಿ ಕೊಂಡಾಡುತ್ತಿದ್ದಾರೆ. ಹಳೆಯ ಪ್ರಸಿದ್ಧ ಗೀತೆಯೊಂದಕ್ಕೆ ಹೊಸ ಮೆರುಗು ಕೊಡುವ ಈ ಪ್ರಯತ್ನವನ್ನು ನೋಡಿ.

ರಾಮ್ ಗೋಪಾಲ್ ವರ್ಮ 'ಬ್ರೂಸ್ ಲೀ' ಟ್ರೇಲರ್ - ಸೌಂದರ್ಯ ಮತ್ತು ಶಕ್ತಿಯ ಮಿಳಿತ

ರಾಮ್ ಗೋಪಾಲ್ ವರ್ಮ 'ಬ್ರೂಸ್ ಲೀ' ಟ್ರೇಲರ್ - ಸೌಂದರ್ಯ ಮತ್ತು ಶಕ್ತಿಯ ಮಿಳಿತ

ರಾಮ್ ಗೋಪಾಲ್ ವರ್ಮ ಅವರು ತೆಲುಗು ಮತ್ತು ಹಿಂದಿಯಲ್ಲಿ ನಿರ್ದೇಶಿಸುತ್ತಿರುವ 'ಬ್ರೂಸ್ ಲೀ' ಸಿನೆಮಾದ ಟ್ರೇಲರ್ ನನ್ನು ಧೀಢಿರನೆ ಬಿಡುಗಡೆ ಮಾಡಿದ್ದಾರೆ. ನಟ-ನಟಿ ಮತ್ತು ತಾಂತ್ರಿಕ ವರ್ಗದ ಯಾವುದೇ ಸುಳಿವು ನೀಡದೆ, ಬ್ರೂಸ್ ಲೀ ಅವರಿಗೆ ಟ್ರಿಬ್ಯೂಟ್ ಎಂದು ಹೇಳಿಕೊಂಡಿರುವ ಆರ್ ಜಿ ವಿ, ಸಿನೆಮಾದಲ್ಲಿ ಯುವತಿಯೊಬ್ಬಳು ತನ್ನ ಮಾರ್ಶಲ್ ಕಲೆಯಲ್ಲಿ ಹುಡುಗರನ್ನು ಹೊಡೆದು ಬೀಳಿಸುವ ದೃಶ್ಯಗಳು ಕಾಣಿಸಿಕೊಂಡಿವೆ.

ರಿಕ್ಕಿ- ಚಿತ್ರದ ಟ್ರೈಲರ್

ರಿಕ್ಕಿ- ಚಿತ್ರದ ಟ್ರೈಲರ್

ರಿಷಬ್ ಶೆಟ್ಟಿ ನಿರ್ದೇಶನದ ಮತ್ತು ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ "ರಿಕ್ಕಿ" ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಟಿ ಹರಿಪ್ರಿಯ, ಅಚ್ಯುತ ಕುಮಾರ್, ಪ್ರಮೋದ್ ಶೆಟ್ಟಿ, ಸಾಧುಕೋಕಿಲಾ, ವೀಣಾ ಸುಂದರ್ ಮತ್ತು ರವಿ ಕಾಳೆ ಸೇರಿದಂತೆ ನುರಿತ ಕಲಾವಿದರ ತಂಡವೇ ಚಿತ್ರದಲ್ಲಿದೆ. ಈ ಹಿಂದೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದ ರಿಕ್ಕಿ ಚಿತ್ರ ತಂಡ ಇದೀಗ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

'ದೊಡ್ಮನೆ ಹುಡ್ಗ' ಟೀಸರ್ ಬಿಡುಗಡೆ

'ದೊಡ್ಮನೆ ಹುಡ್ಗ' ಟೀಸರ್ ಬಿಡುಗಡೆ

ಸೂರಿ ನಿರ್ದೇಶನದ ಪುನೀತ್ ರಾಜಕುಮಾರ್ ನಟನೆಯ 'ದೊಡ್ಮನೆ ಹುಡ್ಗ' ಸಿನೆಮಾ ಘೋಷಿಸಿದಾಗಲಿಂದಲು, 'ದೊಡ್ಮನೆ' ಎಂಬ ಪದ ಬಹಳ ಪ್ರಖ್ಯಾತವಾಗಿರುವುದು ಸಿನೆಮಾ ಬಗ್ಗೆ ಜನರಿಗೆ ನಿರೀಕ್ಷೆಯಂತೆ ಕುತೂಹಲ ಹೆಚ್ಚಿಸಿತ್ತು. ಈಗ 'ಕೆಂಡಸಂಪಿಗೆ' ಬಿಡುಗಡೆ ಮಾಡಿ 'ದೊಡ್ಮನೆ ಹುಡ್ಗ' ದಲ್ಲಿ ತೊಡಗಿಸಿಕೊಂಡಿರುವ ಸೂರಿ ಟೀಸರ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಂಬರೀಶ್, ರವಿಶಂಕರ್, ಪುನೀತ್ ರಾಜಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ಅವರ ಪಾತ್ರಗಳನ್ನು ತೋರಿಸಿದ್ದಾರಷ್ಟೆ ಹೊರಟ ಹೆಚ್ಚಿನದನ್ನೇನೂ ಹೇಳಿಲ್ಲ. ನೀವೊಮ್ಮೆ ನೋಡಿ.

'ರಾಕೆಟ್' ಟ್ರೇಲರ್ ಉಡಾವಣೆ

'ರಾಕೆಟ್' ಟ್ರೇಲರ್ ಉಡಾವಣೆ

ನೀನಾಸಂ ಸತೀಶ್ ನಟಿಸಿ ನಿರ್ಮಿಸಿರುವ 'ರಾಕೆಟ್' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಇಡಿ ಟ್ರೇಲರ್, ಸತೀಶ್ ಅವರ ಹಿರೋಯಿಸಂ ನಿಂದ ತುಂಬಿದ್ದು, ಹೊಡೆಬಡಿದಾಟಗಳು ರಾರಾಜಿಸಿವೆ. ವಾಸ್ತು ಪ್ರಕಾರ ಮೂಲಕ ಪರಿಚಯವಾದ 'ಐಶಾನಿ ಶೆಟ್ಟಿ' ನಾಯಕ ನಟಿ. ಜಗದೀಶ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನೆಮಾಗೆ 'ಪೂರ್ಣಚಂದ್ರ ತೇಜಸ್ವಿ' ಸಂಗೀತ ನೀಡಿದ್ದಾರೆ.