ಮನರಂಜನೆ

ಮಾಸ್ಟರ್ ಪೀಸ್ ಐ ಕಾಂಟ್ ವೈಟ್ ಬೇಬಿ ಟಪಂಗುಚ್ಚಿ ವಿಡಿಯೋ ಸಾಂಗ್

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಮಾಸ್ಟರ್ ಪೀಸ್ ಚಿತ್ರದ ಐ ಕಾಂಟ್ ವೈಟ್ ಬೇಬಿ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಟಪಂಗುಚ್ಚ ಸಾಂಗ್ ಗೆ ಯಶ್ ಹಾಗೂ ಸಾನ್ವಿ ಸಖತ್ ಆಗಿ ಕುಣಿದಿದ್ದಾರೆ. ಇದೇ 24 ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಮಾಸ್ಟರ್ ಪೀಸ್ ಐ ಕಾಂಟ್ ವೈಟ್ ಬೇಬಿ ಟಪಂಗುಚ್ಚಿ ವಿಡಿಯೋ ಸಾಂಗ್
ಯಶ್ ಅಭಿನಯದ ಮಾಸ್ಟರ್ ಪೀಸ್ ಟ್ರೈಲರ್

ಯಶ್ ಅಭಿನಯದ ಮಾಸ್ಟರ್ ಪೀಸ್ ಟ್ರೈಲರ್

ಮುಂದಿನ ವಾರ ತೆರೆಕಾಣಲಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ನಾಯಕಿಯಾಗಿ ಶಾನ್ವಿ ನಟಿಸಿದ್ದು, ಹಾಸ್ಯ ನಟ ಚಿಕ್ಕಣ್ಣ ಮತ್ತು ಪ್ರಮುಖ ಪಾತ್ರದಲ್ಲಿ ನಟ ರವಿಶಂಕರ್ ನಟಿಸಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಮಾಸ್ಟರ್ ಪೀಸ್ ಚಿತ್ರವನ್ನು ಮಂಜು ಮಾಂಡವ್ಯ ನಿರ್ದೇಶಿಸಿದ್ದು, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನವಿದೆ.

ಟ್ರೈಲರ್: ಅಶ್ಲೀಲತೆ ಕ್ಯಾ ಕೂಲ್ ಹೈ ಹಮ್ 3 ಚಿತ್ರದ ಜೀವಾಳ

ಟ್ರೈಲರ್: ಅಶ್ಲೀಲತೆ ಕ್ಯಾ ಕೂಲ್ ಹೈ ಹಮ್ 3 ಚಿತ್ರದ ಜೀವಾಳ

ಸೆಕ್ಸ್‌ ಹಾಗೂ ಕಾಮಿಡಿಯ ಹೂರಣವಿದ್ದ ಬಾಲಿವುಡ್‌ ಚಿತ್ರ 'ಕ್ಯಾ ಕೂಲ್‌ ಹೈ ಹಮ್‌'ನ ಮೂರನೇ ಸಿಕ್ವೆಲ್‌ ಚಿತ್ರ ಕ್ಯಾ ಕೂಲ್ ಹೈ ಹಮ್ 3 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಹಾಟ್ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್‌ ನಟರಾದ ತುಷಾರ್‌ ಕಪೂರ್‌ ಹಾಗೂ ಅಫ್ತಾಬ್‌ನೊಂದಿಗೆ ನಟಿ ಮಂದಾನಾ ಕರಿಮಿ ಬಿಕಿನಿಯಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾಳೆ.

ಅಣ್ಣಂಗೆ ಲವ್ ಆಗಿದೆ; ಮತ್ತೆ  ಹಾಡಿದ ಯಶ್; ಮೇಕಿಂಗ್ ವಿಡಿಯೋ

ಅಣ್ಣಂಗೆ ಲವ್ ಆಗಿದೆ; ಮತ್ತೆ ಹಾಡಿದ ಯಶ್; ಮೇಕಿಂಗ್ ವಿಡಿಯೋ

ಮಿ ಅಂಡ್ ಮಿಸಸ್ ರಾಮಾಚಾರಿ ಸಿನೆಮಾದ ನಂತರ ಯಶ್ ಅವರ ಮಾಸ್ಟರ್ ಪೀಸ್ ಸಿನೆಮಾಗೆ ಎಲ್ಲಿಲ್ಲದ ಕುತೂಹಲ ಮೂಡಿದೆ. ಆ ಸಿನೆಮಾದಲ್ಲಿ 'ಅಣ್ತಮ್ಮ' ಹಾಡು ಹಾಡಿ ಮನೆಮಾತಾಗಿದ್ದ ನಟ ಯಶ್ ಇದರಲ್ಲೂ 'ಅಣ್ಣಂಗೆ ಲವ್ ಆಗಿದೆ' ಎನ್ನುವ ಹಾಡೂ ಹಾಡುವ ಮೂಲಕ ಮತ್ತೆ ಮೋಡಿ ಮಾಡಲು ಸಿದ್ಧವಾಗಿದ್ದಾರೆ. ಶಾಲಿನಿ ನಾಯಕಿ. ಹರಿಕೃಷ್ಣ ಸಂಗೀತ್, ವೈದಿ ಸಿನೆಮ್ಯಾಟೋಗ್ರಫಿ ಮತ್ತು ಮಂಜು ಮಾಂಡವ್ಯ ನಿರ್ದೇಶನ.

'ಬಾಜಿರಾವ್ ಮಸ್ತಾನಿ' ನೂತನ ಟ್ರೇಲರ್

'ಬಾಜಿರಾವ್ ಮಸ್ತಾನಿ' ನೂತನ ಟ್ರೇಲರ್

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ನಟಿಸಿರುವ ಭಾಜಿರಾವ್ ಮಸ್ತಾನಿ ಸಿನೆಮಾದ ನೂತನ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಕೆಲವು ತಿಂಗಳಷ್ಟೇ ಮೊದಲು ಬಿಡುಗಡೆಯಾದ ಮತ್ತೊಂದು ಯುದ್ಧ ಚಲನಚಿತ್ರ 'ಬಾಹುಬಲಿ' ದಾಖಲೆಗಳನ್ನು ಈ ಚಿತ್ರ ಮುರಿಯಲಿದೆಯೇ? ಸಿನೆಮಾ ಡಿಸೆಂಬರ್ ೧೮ಕ್ಕೆ ಬಿಡುಗಡೆಯಾಗಲಿದೆ.

ಶ್ರೀಮುರಳಿ 'ರಥಾವರ' ಟ್ರೇಲರ್

ಶ್ರೀಮುರಳಿ 'ರಥಾವರ' ಟ್ರೇಲರ್

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ 'ರಥಾವರ' ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಶ್ರೀಮುರಳಿ ಮತ್ತು ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿರುವ ಸಿನೆಮಾದ ಟ್ರೇಲರ್ ಆಕ್ಷನ್ ದೃಶ್ಯಗಳಿಂದ ತುಂಬಿದ್ದು ಮುರಳಿ ಅಭಿಮಾನಿಗಳಿಗೆ ರಸದೌತಣ ನೀಡಿದೆ. ಕಳೆದ ವರ್ಷ 'ಉಗ್ರಂ' ಸೂಪರ್ ಹಿಟ್ ಚಿತ್ರ ನೀಡಿದ ಮುರಳಿ ಆ ಯಶಸ್ಸನ್ನು ಮರುಕಳಿಸುವರೇ? ಡಿಸೆಂಬರ್ ೪ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಮೋದಿಗಾಗಿ ಹಾಡಿನ ವಿಡಿಯೋ ಮಾಡಿದ ಸೆನ್ಸಾರ್ ಮಂಡಲಿ ಅಧ್ಯಕ್ಷ

ಮೋದಿಗಾಗಿ ಹಾಡಿನ ವಿಡಿಯೋ ಮಾಡಿದ ಸೆನ್ಸಾರ್ ಮಂಡಲಿ ಅಧ್ಯಕ್ಷ

ಸೆನ್ಸಾರ್ ಮಂಡಲಿ ಅಧ್ಯಕ್ಷ ಪಹ್ಲಜ್ ನಿಹಲಾನಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿ ಮಾಡಿರುವ ಈ ವಿಡಿಯೋ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮೋದಿ ಅಭಿಮಾನಿಗಳು ಇದನ್ನು ಹೆಚ್ಚೆಚ್ಚು ಹಂಚಿಕೊಳ್ಳುತ್ತಿದ್ದರೆ, ರಾಜಕೀಯ ಲಾಭ ಪಡೆದ ನಿಹಲಾನಿ ಘನತೆ ಮರೆತು ಮಾಡಿರುವ ಕೆಟ್ಟ ವಿಡಿಯೋ ಎಂದು ಕೆಲವರು ಜರಿದಿದ್ದಾರೆ. ಮೇರಾ ದೇಶ್ ಹೈ ಮಹಾನ್, ಮೇರ ದೇಶ್ ಹೈ ಜವಾನ್ ಎಂಬ ಈ ವಿಡಿಯೋ ಸಲ್ಮಾನ್ ಖಾನ್ ಅವರ ಪ್ರೇಮ್ ರತನ್ ಧನ ಪಾಯೋ ಸಿನೆಮಾದ ಮಧ್ಯಂತರದಲ್ಲಿ ದೇಶದಾದ್ಯಂತ ತೋರಿಸಲಾಗುತ್ತಿದೆ.

'ದಿಲ್ವಾಲೆ' ಟ್ರೇಲರ್ ಗೆ ಥ್ರಿಲ್ ಆದ ಅಭಿಮಾನಿಗಳು

'ದಿಲ್ವಾಲೆ' ಟ್ರೇಲರ್ ಗೆ ಥ್ರಿಲ್ ಆದ ಅಭಿಮಾನಿಗಳು

ರೋಹಿತ್ ಶೆಟ್ಟಿ ನಿರ್ದೇಶನದ ದಿಲ್ವಾಲೆ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ ೬೦ ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. ಶಾರುಕ್ ಖಾನ್ ಮತ್ತು ಕಾಜೋಲ್ ಜೋಡಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಈ ಸಿನೆಮಾದಲ್ಲಿ ವರುಣ್ ಧವನ್ ಮತ್ತು ಕೃತಿ ಸನಾನ್ ಜೋಡಿ ಕೂಡ ಮುಖ್ಯ ಭೂಮಿಕೆಯಲ್ಲಿದೆ. ಎಕ್ಸಾಟಿಕ್ ಪ್ರದೇಶಗಳಲ್ಲಿ ಚಿತ್ರೀಕರಿಸಿರುವ ಈ ಸಿನೆಮಾದಲ್ಲಿ ಹೇರಳ ಆಕ್ಷನ್ ದೃಶ್ಯಗಳಿರುವ ಸುಳಿವನ್ನು ಟ್ರೇಲರ್ ಬಿಚ್ಚಿಟ್ಟಿದೆ. ಸಿನೆಮಾ ಡಿಸೆಂಬರ್ ೧೮ಕ್ಕೆ ಬಿಡುಗಡೆಯಾಗಲಿದೆ.

ನೋಡಿ ಸ್ವಾಮಿ ನಾವಿರೋದ್ ಹೀಗೆ: ಶಂಕರನಾಗ್ ಅವರ ಅಪರೂಪದ ಸ್ಟೇಜ್ ವಿಡಿಯೋ

ನೋಡಿ ಸ್ವಾಮಿ ನಾವಿರೋದ್ ಹೀಗೆ: ಶಂಕರನಾಗ್ ಅವರ ಅಪರೂಪದ ಸ್ಟೇಜ್ ವಿಡಿಯೋ

ಕನ್ನಡ ಚಿತ್ರರಂಗ ಕಂಡ ಮಹಾನ್ ಕ್ರಿಯಾಶೀಲ ವ್ಯಕ್ತಿ ಹಾಗೂ ಅತ್ಯದ್ಭುತ ನಟ ಕಮ್ ನಿರ್ದೇಶಕ. ಅವರಿಗೆ ಇಂದು 61ನೇ ಜನ್ಮದಿನ. ಶಂಕರನಾಗ್ ಮರೆಯಾಗಿ 25 ವರ್ಷಗಳೇ ಕಳೆದರು ಅವರ ನೆನಪು ಮಾತ್ರ ನಮ್ಮನ್ನು ಇನ್ನು ಕಾಡುತ್ತಲೇ ಇದೆ. 1982ರಲ್ಲಿ ಜಯನಗರದ ಕಾಸ್ಮೋಪಾಲಿಟನ್ ಕ್ಲಬ್ ನಲ್ಲಿ ಶಂಕರ್ ನಾಗ್ ನೀಡಿದ್ದ ಸ್ಟೇಜ್ ಶೋ ವಿಡಿಯೋವೊಂದನ್ನು ಅವರ ಸ್ಮರಣಾರ್ಥ ಇಲ್ಲಿ ಹಾಕಲಾಗಿದೆ.

ಶಾರುಕ್ ಖಾನ್ 'ಫ್ಯಾನ್' ಟೀಸರ್

ಶಾರುಕ್ ಖಾನ್ 'ಫ್ಯಾನ್' ಟೀಸರ್

ಇತ್ತೀಚೆಗಷ್ಟೇ ೫೦ ನೆಯ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಬಾದ್ ಶಃ ಅವರ 'ಫ್ಯಾನ್' ಚಲನಚಿತ್ರಕ್ಕೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ ಗೆ ಬಿಡುಗಡೆಯಾಗಲಿರುವ ಈ ಸಿನೆಮಾದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಒಂದು ವಾರದ ಅವಧಿಯಲ್ಲಿ ೩೮ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿರುವುದು ವಿಶೇಷ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರ ಯಶ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿದೆ.

ಆಸ್ಕರ್ ಸ್ಪರ್ಧೆಯಲ್ಲಿರುವ c/o ಫುಟ್ ಪಾತ್-೨ ಟ್ರೇಲರ್

ಆಸ್ಕರ್ ಸ್ಪರ್ಧೆಯಲ್ಲಿರುವ c/o ಫುಟ್ ಪಾತ್-೨ ಟ್ರೇಲರ್

ಯುವ ನಿರ್ದೇಶಕ ಕಿಶನ್ ನಿರ್ದೇಶನದ ಕನ್ನಡ ಚಲನಚಿತ್ರ 'ಕೇರ್ ಆಫ್ ಪುಟ್ ಪಾತ್-೨' ಆಸ್ಕರ್ ಸ್ಪರ್ಧೆಗೆ ಲ್ಯಾಟರಲ್ ಪ್ರವೇಶ ಪಡೆದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ತೆಲುಗು ಮತ್ತು ಹಿಂದಿಗೂ ಡಬ್ ಆಗಿರುವ ಈ ಸಿನೆಮಾದ ಟ್ರೇಲರ್ ಈಗ ಬಿಡುಗಡೆಯಾಗಿದೆ. ಅಮೆರಿಕಾಕ್ಕೆ ಹಾರಿರುವ ಕಿಶನ್ ಆಸ್ಕರ್ಸ್ ಗೆದ್ದು ತಂದರೆ ವಿಮಾನ ನಿಲ್ದಾಣದಿಂದ ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದು ಸಾ ರಾ ಗೋವಿಂದು ಹೇಳಿರುವುದು ವಿಶೇಷ!