ಮನೆಯ ಚಾವಣಿಗೆ ಫ್ಯಾನ್ ಕೂಡಿಸಲು ಅಥವಾ ಇನ್ನಿತರೆ ವಸ್ತುಗಳನ್ನು ಕೂಡಿಸುವುದಕ್ಕಾಗಿ ಹೋಲ್ ಮಾಡುವಾಗ ಕಣ್ಣಿ ಧೂಳು ಬೀಳದಂತೆ ಎಚ್ಚರವಹಿಸಿ. ಇದಕ್ಕಾಗಿ ಕನ್ನಡಕ ಧರಿಸಿದ್ದರೆ ಒಳ್ಳೆಯದು.
ಗೋಡೆಗೂ ಹೋಲ್ ಮಾಡುವಾಗ ಅದರ ಮೇಲೆ ಯಾವುದಾದರೂ ವಸ್ತುಗಳಿದ್ದರೆ ಅದನ್ನು ತೆಗೆದು ಕೆಳಗಿಡಿ. ಅಷ್ಟೇ ಅಲ್ಲ, ತಲೆಯ ಮೇಲೆ ಯಾವುದಾದರೂ ವಸ್ತುಗಳು ಬೀಳುವುದಿದ್ದರೆ ಅವುಗಳನ್ನು ತೆಗೆದಿಟ್ಟು ಕೆಲಸ ಮಾಡುವುದು ಒಳಿತು.
ಮನೆ ಕಟ್ಟುವಾಗ ಎಷ್ಟು ಕಟ್ಟಿಗೆ ಅವಶ್ಯಕತೆ ಇದೆಯೊ ಅಷ್ಟನ್ನು ಮಾತ್ರ ತನ್ನಿರಿ. ಕಾರಣ, ಗಿಡಗಳನ್ನು ಕಡಿದು ಕಟ್ಟಿಗೆಗಳನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಹೀಗಾಗಿ ಸಾಧ್ಯವಾದಷ್ಟು ಮಟ್ಟಿಗೆ ಕಬ್ಬಿಣ ಅಥವಾ ಸ್ಟೀಲ್‌ನಿಂದ ತಯಾರಿಸಿದ ವಸ್ತುಗಳ ಬಳಕೆ ಉತ್ತಮ.
ಮನೆಗಳಿಗೆ ಆದಷ್ಟು ಪರಿಸರಸ್ನೇಹಿ ವಸ್ತುಗಳನ್ನು ಅಳವಡಿಸಿ.