

ಗಿಡಕ್ಕೆ ಗೊಬ್ಬರ
ಕಾಫಿ ಚರಟವನ್ನು ಬಿಸಾಕದಿರಿ. ಮನೆಯಲ್ಲಿರುವ ಗಿಡಗಳ ಬುಡಕ್ಕೆ ಸುರಿಯಿರಿ. ಕಾಫಿ ಚರಟದಲ್ಲಿ ಅತ್ಯಧಿಕ ಪೌಷ್ಟಿಕಾಂಶ ಇರುವುದರಿಂದ ಗಿಡಗಳ ಬೆಳವಣಿಗೆಗೆ ಉತ್ತಮ ಗೊಬ್ಬರವಾಗಿ ಕೆಲಸ ಮಾಡುತ್ತವೆ.
ಧೂಳೆಬ್ಬಿಸದು
ಬೆಂಕಿಯೊಲೆ ಅಥವಾ ಅಗ್ಗಿಷ್ಟಿಕೆಯಲ್ಲಿ ಉಳಿದ ಬೂದಿಯನ್ನು ತೆಗೆಯುವ ಮುನ್ನ ಅದಕ್ಕೆ ಒದ್ದೆಯಾಗಿರುವ ಕಾಫಿ ಚರಟಸಿಂಪಡಿಸಿ. ಆಗ ಬೂದಿ ತೆಗೆಯಲು ಸುಲಭವಾಗುತ್ತದೆ. ಅಷ್ಟೇ ಅಲ್ಲ, ಬೂದಿ ಹಾಗೂ ಅದರಿಂದ ಏಳುವ ಧೂಳು ನಿಮ್ಮ ಕೋಣೆ ಮಲಿನಗೊಳಿಸುವುದನ್ನೂ ತಡೆಯುತ್ತದೆ.
ಫ್ರಿಡ್ಜ್ ದುರ್ವಾಸನೆ ತಡೆಗೆ
ಆಹಾರ ಪದಾರ್ಥಗಳು ಹಾಳಾಗಿ ನಿಮ್ಮ ಫ್ರಿಡ್ಜ್ನಿಂದ ವಾಸನೆ ಬರುತ್ತಿದೆಯೇ? ಒಂದು ಬಟ್ಟಲಿಗೆ ಬಳಸಿದ ಅಥವಾ ತಾಜಾ ಕಾಫಿ ಚರಟವನ್ನು ತುಂಬಿ ಒಂದು ರಾತ್ರಿಯಿಡೀ ಫ್ರೀಜರ್ನಲ್ಲಿಡಿ. ಆ ಬಟ್ಟಲಿಗೆ ಸ್ವಲ್ಪ ವೆನಿಲ್ಲಾ ಹನಿಯನ್ನು ಸೇರಿಸಿದರೆ ಇನ್ನೂ ಉತ್ತಮ. ಫ್ರಿಡ್ಜ್ನ ವಾಸನೆಯೆಲ್ಲ ದೂರವಾಗುತ್ತದೆ.
ಬೆಕ್ಕುಗಳ ದೂರವಿಡಲುನಿಮ್ಮ ಪ್ರೀತಿಯ ಬೆಕ್ಕು ಉದ್ಯಾನದಲ್ಲೇ ಮಲಮೂತ್ರ ವಿಸರ್ಜನೆ ಮಾಡುತ್ತದೆಯೇ? ಅದನ್ನು ತಪ್ಪಿಸಲು ಉದ್ಯಾನದ ಗಿಡಗಳ ಸುತ್ತಲೂ ಕಾಫಿ ಚರಟವನ್ನು ಸಿಂಪಡಿಸಿ ಬಿಡಿ. ಕಿತ್ತಳೆ ಸಿಪ್ಪೆಗಳಿದ್ದರೂ ಅವುಗಳನ್ನೂ ಹಾಕಿ ಬಿಡಿ. ನಿಮ್ಮ ಬೆಕ್ಕು ಉದ್ಯಾನದ ಕಡೆಗೆ ಮುಖ ಕೂಡ ಹಾಕುವುದಿಲ್ಲ.