ಉದ್ದಿನಬೇಳೆ ಉಪಯೋಗಿಸದವರು ಇಡ್ಲಿ ಹುದುಗಿಗಾಗಿ ಅಕ್ಕಿಗೆ ಸಮಾನ ಅಳತೆಯ ಬೂದುಗುಂಬಳ ತುರಿದು ಹಾಕಿ ರುಬ್ಬಿಟ್ಟು ಇಡ್ಲಿ ಮಾಡಬಹುದು. ಇಡ್ಲಿ ಮೃದುವಾಗಿರುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು.
ನಿಂಬೆಹಣ್ಣಿನ ಪಾನಕಕ್ಕೆ ಚಿಟಿಕೆ ಉಪ್ಪು ಸೇರಿಸಿದರೆ ಬಾಯಾರಿಕೆ ಶಮನವಾಗುತ್ತದೆ.
ನೆಲ್ಲಿಕಾಯಿ ಉಪ್ಪಿನಕಾಯಿಗೆ ಹುಣಸೆಕಾಯಿ ರಸ ಬೆರೆಸಿದರೆ ರುಚಿ ಹೆಚ್ಚು.
ಚಪಾತಿ ಅಥವಾ ಪೂರಿಗೆ ಹಿಟ್ಟು ಕಲೆಸುವಾಗ ಹಾಲು ಸ್ವಲ್ಪ, ಹುಳಿ ಮೊಸರು ಸ್ವಲ್ಪ ಹಾಕಿ ನೀರು ಬೆರೆಸಿ ಕಲೆಸಿದಲ್ಲಿ ಹಿಟ್ಟು ಮೃದುವಾಗುತ್ತದೆ.
ದೋಸೆ ಹಿಟ್ಟು ಹುಳಿಯಾಗಿದ್ದರೆ ಅದಕ್ಕೆ ಒಂದು ಲೀಟರ್ ನೀರು ಬೆರೆಸಿ. ಒಂದು ಗಂಟೆ ಹಾಗೆಯೇ ಇಡಿ. ನಂತರ ಮೇಲಿರುವ ತಿಳಿನೀರನ್ನು ಚೆಲ್ಲಿ, ಕೆಳಗಿನ ಹಿಟ್ಟನ್ನು ಉಪಯೋಗಿಸಿ.