ಪೀಠ ಪಾಠ

ಮನೆಗಳಿಗೆ ಅಗತ್ಯ ಇರುವ ಎಲ್ಲ ಬಗೆಯ ಪೀಠೋಪಕರಣಗಳನ್ನು ಖರೀದಿಸುತ್ತವೆ. ಪೀಠೋಪಕರಣಕ್ಕೆ ಎಷ್ಟು ದಿನ ವಾರಂಟಿ ಇದೆ ಎಂಬುದನ್ನು ಮಾತ್ರ ನೋಡುತ್ತೇವೆ.
ಪೀಠ ಪಾಠ
Updated on: 

ಮನೆಗಳಿಗೆ ಅಗತ್ಯ ಇರುವ ಎಲ್ಲ ಬಗೆಯ ಪೀಠೋಪಕರಣಗಳನ್ನು ಖರೀದಿಸುತ್ತವೆ. ಪೀಠೋಪಕರಣಕ್ಕೆ ಎಷ್ಟು ದಿನ ವಾರಂಟಿ ಇದೆ ಎಂಬುದನ್ನು ಮಾತ್ರ ನೋಡುತ್ತೇವೆ. ಯಾಕೆಂದರೆ, ಅದನ್ನು ಜಾಸ್ತಿ ದಿನ ಕಾಪಾಡಿಕೊಳ್ಳುವ ಆತ್ಮವಿಶ್ವಾಸ ಕೊಳ್ಳುವ ಮೊದಲೇ ನಮ್ಮ ಮನಸ್ಸಿನಿಂದ ಹೊರಟು ಹೋಗಿರುತ್ತದೆ.

ಪೀಠೋಪಕರಣಗಳನ್ನು ಕೊಂಡ ನಂತರ ಅವುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಅವುಗಳನ್ನು ಜತನದಿಂದ ನೋಡಿಕೊಂಡರೆ ಹೆಚ್ಚು ದಿನ ಬಾಳಿಕೆ ಬರುವುದರಲ್ಲಿ ಅನುಮಾನವಿಲ್ಲ. ಇದಕ್ಕಾಗಿ ಸ್ವಲ್ಪವೇ ಸ್ವಲ್ಪ ಸಮಯ ವ್ಯಯಿಸಿದರೆ ಸಾಕು. ನಮ್ಮ ಹಣ ನಮ್ಮ ಜೇಬಿನಲ್ಲೇ ಉಳಿಯುತ್ತದೆ. ಪೀಠೋಪಕರಣಗಳನ್ನು ನೋಡಿಕೊಳ್ಳಲು ನಿತ್ಯ ಅವುಗಳತ್ತ ಲಕ್ಷ್ಯ ವಹಿಸಬೇಕು ಎಂದರ್ಥವಲ್ಲ. ಸಮಯ ಸಿಕ್ಕಾಗ ಅವುಗಳತ್ತ ಚಿತ್ತ ವಹಿಸಿದರೆ ಸಾಕು. ಹಾಗಾದರೆ ಪೀಠೋಪಕರಣಗಳು ಹೆಚ್ಚು ದಿನ ಬಾಳಿಕೆ ಬರಲು, ಜತೆಗೆ ಸುಂದರವಾಗಿ ಕಾಣಲು ಏನು ಮಾಡಬೇಕು?

  •  ನಿತ್ಯ ಒಣ ಬಟ್ಟೆಯಿಂದ ಶುಭ್ರಗೊಳಿಸಿ ಸ್ವಚ್ಛವಾಗಿಟ್ಟುಕೊಳ್ಳಿ.
  •  ಧೂಳಿನ ಕಣಗಳು ಪೀಠೋಪಕರಣಗಳ ಮೇಲೆ ಬೀಳದಂತೆ ಎಚ್ಚರ ವಹಿಸಿ. ಒಂದು ವೇಳೆ ಬಿದ್ದರೂ ತಕ್ಷಣ ಒಣಗಿದ ಬಟ್ಟೆಯಿಂದ ಬೇಗನೆ ಒರೆಸಿಬಿಡಿ.
  •  ಪೀಠೋಪಕರಣದ ಮೇಲೆ ನೀರು ಬಿದ್ದಿದ್ದರೆ, ಬೇಗನೆ ಶುಭ್ರಗೊಳಿಸಿ. ಇಲ್ಲವಾದಲ್ಲಿ ಕಟ್ಟಿಗೆ ಭಾಗ ಹಾಳಾಗುವ ಸಾಧ್ಯತೆ ಹೆಚ್ಚು.
  •  ಯಾವುದೇ ಕಾರಣಕ್ಕೂ ಡಿಟರ್ಜೆಂಟ್, ಸಾಬೂನು ಅನ್ನು ಪೀಠೋಪಕರಣ ಸ್ವಚ್ಛತೆಗೆ ಬಳಸಬೇಡಿ.
  •  ಊಟ ಮಾಡಿದ ನಂತರ ಪೀಠೋಪಕರಣದ ಮೇಲೆ ಬಿದ್ದಿರುವ ಮುಸುರೆಯನ್ನು ಒಣ ಬಟ್ಟೆಯಿಂದ ತೆಗೆದು ಹಾಕಿ.
  •  ಆಲ್ಕೋಹಾಲ್, ಸುಡುವ ಆಹಾರ, ಸಿಗರೇಟ್ನಂಥ ವಸ್ತುಗಳನ್ನು ಪೀಠೋಕರಣಗಳಿಂದ ದೂರವಿಡಿ.
  •  ಊಟ ಮಾಡುವಾಗ, ಬರೆಯುವಾಗ ಆದಷ್ಟು ಬಳಸಿ ಬಿಸಾಡುವ ಪೇಪರ್ ಕೆಳಗಡೆ ಇಟ್ಟುಕೊಂಡಿರಿ.
- ಎಚ್ಚೆನ್ ಬ್ರಹ್ಮ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com