

ಈ ಹೈಫೈ ಲೈಫ್ನಲ್ಲಿ ಮನೆ ಮಂದಿಯೆಲ್ಲ ಒಟ್ಟಾಗಿ ಇರಬೇಕೆಂದರೆ ವೀಕೆಂಡೇ ಬರಬೇಕು. ಮನೆಯಲ್ಲಿರುವ ಎಲ್ಲರೂ ಹೊರಗೆ ಹೋಗಿ ದುಡಿಯುವವರೇ ಆಗಿರುವುದರಿಂದ ಎಲ್ಲರಿಗೂ ತರಾತುರಿಯ ಕೆಲಸ. ಹಾಗಾಗಿ ಮನೆಗೆ ಯಾರಾದರೂ ಅತಿಥಿಗಳು ದಿಢೀರ್ ಎಂದು ಆಗಮಿಸಿಬಿಟ್ಟರೆ ಮನೆಯವರಿಗೆಲ್ಲ ಒಂಥರಾ ಅನ್ಕಂಫರ್ಟೆಬಲ್ ಫೀಲ್.
ಅತಿಥಿಗಳನ್ನು ಚೆನ್ನಾಗಿ ಸತ್ಕರಿಸಬೇಕೆಂಬ ಮನಸ್ಸೇನೋ ಇರಬಹುದು. ಆದರೆ ಮೊದಲೇ ತಿಳಿಸದೆ ಅಥವಾ ಅವರ ಬಿಡುವಿನ ಸಮಯ ನೋಡಿಕೊಂಡು ಹೋಗದಿದ್ದರೆ ಅವರಾದರೂ ಏನು ಮಾಡಬೇಕು? ಅವರಿಗೆ ಮನೆಗೆ ಬಂದ ನೆಂಟರನ್ನು ಬೇಕಾಬಿಟ್ಟಿ ಉಪಚರಿಸುವ ಹಾಗೂ ಇಲ್ಲ. ತಮ್ಮ ಕೆಲಸ ಕಾರ್ಯಗಳನ್ನು ಬಿಡುವ ಹಾಗೂ ಇಲ್ಲ ಎಂಬಂತಾಗಬಹುದು.
ಹೀಗಾಗಿ ಅತಿಥಿಗಳಾಗಿ ಇನ್ನೊಬ್ಬರ ಮನೆಗೆ ಹೋಗುವ ಮೊದಲು ಕೆಲವು ಅಂಶಗಳನ್ನು ಗಮನದಲ್ಲಿರಲಿ...