

'ಊಟ ಮಾಡುವಾಗ ಮಾತಾಡ್ಬಾರ್ದು' ಅಂತ ಕೆಲವರು ಮೌನವ್ರತ ಆಚರಿಸುವುದು ಉಂಟು. ಇದೇ ರೀತಿ ಅಮೆರಿಕದ ಬ್ರೂಕ್ಲಿನ್ ಸಿಟಿಯ 'ಈಟ್ ರೆಸ್ಟೋರೆಂಟ್' ಇಂಥದ್ದೇ ಮೌನವ್ರತಕ್ಕೆ ಆದ್ಯತೆ ಕೊಟ್ಟಿದೆ. ಇಲ್ಲಿಗೆ ಬರುವ ಗಿರಾಕಿಗಳು ಯಾರೂ ಮಾತನಾಡುವ ಹಾಗಿಲ್ಲ. ಕೇವಲ ಪ್ರೇಮಿಗಳಿಗಷ್ಟೇ ಇಲ್ಲಿ ಪ್ರವೇಶ. ನಿತ್ಯ ನೂರಾರು ಪ್ರೇಮಿಗಳು ಇಲ್ಲಿಗೆ ಬಂದು ಗಂಟೆಗಟ್ಟಲೆ ಮೌನಿಗಳಾಗುತ್ತಾರೆ. ಹೆಣ್ಣುಮಕ್ಕಳು ಮಾತಿಗೆ ಹೆಸರುವಾಸಿ. ಇಲ್ಲಿ ಅದ್ಹೇಗೆ ಮೌನಿಯಾಗಿರುತ್ತಾರೆ ಎನ್ನುವುದು ಒಂದು ಒಗಟು.
- ವೈ.ಬಿ. ಕಡಕೋಳ