ಚೀನಾದ ರಾಸಾಯನಿಕ ಘಟಕದಲ್ಲಿ ಸ್ಫೋಟ: ಸಾವಿನ ಸಂಖ್ಯೆ 112ಕ್ಕೆ ಏರಿಕೆ

ಮೊನ್ನೆ ಬುಧವಾರ ಟಿಯಾಂಜಝಿನ್ ನ ರಾಸಾಯನಿಕ ಶೇಖರಣಾ ಘಟಕವೊಂದರಲ್ಲಿ ಸಂಭವಿಸಿದ ಭಾರಿ ಸ್ಫೋಟವೊಂದರಲ್ಲಿ...
ಚೀನಾದ ಕೈಗಾರಿಕೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ ಹೊರಬಂದ ವಿಷಕಾರಿ ಹೊಗೆ
ಚೀನಾದ ಕೈಗಾರಿಕೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ ಹೊರಬಂದ ವಿಷಕಾರಿ ಹೊಗೆ
Updated on: 

ಟಿಯಾಂಝಿನ್(ಚೈನಾ): ಮೊನ್ನೆ ಬುಧವಾರ ಟಿಯಾಂಜಝಿನ್ ನ ರಾಸಾಯನಿಕ ಶೇಖರಣಾ ಘಟಕವೊಂದರಲ್ಲಿ ಸಂಭವಿಸಿದ ಭಾರಿ ಸ್ಫೋಟವೊಂದರಲ್ಲಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಸಾವಿನ ಸಂಖ್ಯೆ 112ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಗಾಳಿಯಲ್ಲಿ ವಿಷಕಾರಿ ರಾಸಾಯನಿಕಗಳು ಬೆರೆತಿರುವ ಸಾಧ್ಯತೆಯಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.

ಟಿಯಾಂಝಿನ್ ನ ಕೈಗಾರಿಕಾ ಪ್ರದೇಶವೊಂದರಲ್ಲಿ ಮೊನ್ನೆ ಬುಧವಾರ ರಾತ್ರಿ  ರಾಸಾಯನಿಕಗಳು ಸಂಗ್ರಹ ಸೌಲಭ್ಯ ಕೇಂದ್ರದಲ್ಲಿ ಸ್ಪೋಟವುಂಟಾಯಿತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಲಾಯಿತು. ಟಿಯಾಂಝಿನ್ ಚೈನಾದ ದೊಡ್ಡ ನಗರಗಳಲ್ಲಿ ಒಂದಾಗಿದ್ದು, ಇಲ್ಲಿ ಸುಮಾರು 15 ದಶಲಕ್ಷ ಜನರಿದ್ದಾರೆ.

ರಾತ್ರಿ 11.30ರ ಸುಮಾರಿಗೆ ಎರಡು ಭಾರೀ ಸ್ಫೋಟ ಉಂಟಾಯಿತು. ಸ್ಫೋಟಕ್ಕೆ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com