ಐಎಸ್ ಉಗ್ರರ ಚಿನ್ನದ ಕರೆನ್ಸಿ ಅಸ್ತ್ರ

ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಎಂದೇ ಹೇಳಲಾಗುವ ಐಎಸ್‍ಐಎಸ್, ಇದೀಗ ಚಿನ್ನದ ನಾಣ್ಯ ಟಂಕಿಸುವ ಮೂಲಕ ತನ್ನದೇ ಹಣ ಚಲಾವಣೆಗೆ...
ಐಎಸ್ ಉಗ್ರರ ಚಿನ್ನದ ಕರೆನ್ಸಿ ಅಸ್ತ್ರ
Updated on

ಲಂಡನ್: ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಎಂದೇ ಹೇಳಲಾಗುವ ಐಎಸ್‍ಐಎಸ್, ಇದೀಗ ಚಿನ್ನದ ನಾಣ್ಯ ಟಂಕಿಸುವ ಮೂಲಕ ತನ್ನದೇ ಹಣ ಚಲಾವಣೆಗೆ ತಂದಿದೆ. ಇದು ಜಗತ್ತಿನ ಇತರ ರಾಷ್ಟ್ರಗಳನ್ನು ತನ್ನ ಜೀತಕ್ಕೆ ಇಟ್ಟುಕೊಳ್ಳುವ ಹುನ್ನಾರದ ಅಮೆರಿಕದ ಬಂಡವಾಳಶಾಹಿ ಹಣಕಾಸು ವ್ಯವಸ್ಥೆಗೆ ತಾನು ಕೊಡುತ್ತಿರುವ ಪೆಟ್ಟು ಎಂದು ಇತ್ತೀಚಿನ ತನ್ನ ವೀಡಿಯೊದಲ್ಲಿ ಐಎಸ್ ಹೇಳಿಕೊಂಡಿದೆ.

ಚಿನ್ನದ ನಾಣ್ಯ ಟಂಕಿಸುವ ಐಎಸ್‍ನ ಟಂಕ ಸಾಲೆಯ ಚಿತ್ರಗಳೂ ವಿಡಿಯೋದಲ್ಲಿದ್ದು, ಚಿನ್ನದ ಕರೆನ್ಸಿ ಮೂಲಕ ಅಮೆರಿಕ ಹಣಕಾಸು ವಹಿವಾಟಿಗೆ ಶಧಕ್ಕೆ ತರುವ ಹುನ್ನಾರದಿಂದಲೇ ಈ ತಂತ್ರಕ್ಕೆ ಮೊರೆಹೋಗಿದೆ ಎನ್ನಲಾಗಿದ್ದು, 9/11 ದಾಳಿಯ ಬಳಿಕ ಅಮೆರಿಕಕ್ಕೆ ನೀಡುತ್ತಿರುವ ಎರಡನೇ ಹೊಡೆತ ಇದು ಎಂದೂ ಐಎಸ್ ಹೇಳಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com