ಕಾಕ್‌ಪಿಟ್‌ಗೆ ಇಮ್ರಾನ್ ಖಾನ್ ಮಾಜಿ ಪತ್ನಿ, ಪೈಲಟ್ ವಿರುದ್ಧ ತನಿಖೆ

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಅವರನ್ನು ವಿಮಾನ ಕಾಕ್‌ಪಿಟ್‌ಗೆ ಬಿಟ್ಟುಕೊಂಡ ಪೈಲಟ್...
ರೆಹಮ್ ಖಾನ್
ರೆಹಮ್ ಖಾನ್

ಲಾಹೋರ್: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಅವರನ್ನು ವಿಮಾನ ಕಾಕ್‌ಪಿಟ್‌ಗೆ ಬಿಟ್ಟುಕೊಂಡ ಪೈಲಟ್ ವಿರುದ್ಧ ಪಾಕಿಸ್ತಾನ ಇಂಟರ್‌ನ್ಯಾಷಿನಲ್ ಏರ್‌ಲೈನ್ಸ್(ಪಿಐಎ) ತನಿಖೆಗೆ ಆದೇಶಿಸಿದೆ.

ಪ್ರಾಥಮಿಕ ತನಿಖೆ ಪ್ರಕಾರ, ಲಂಡನ್‌ನಿಂದ ಲಾಹೋರ್‌ಗೆ ಪ್ರಯಾಣ ಮಾಡುತ್ತಿದ್ದ ವೇಳೆ ರೆಹಮ್ ಖಾನ್ ಅವರು ಕಾಕ್‌ಪಿಟ್ ಪ್ರವೇಶಿಸಿ, ಕೆಲವು ನಿಮಿಷಗಳ ಕಾಲ ಪೈಲಟ್ ಜೊತೆ ಕುಳಿತಿದ್ದರು ಎಂದು ಪಿಐಎ ವಕ್ತಾರ ಡ್ಯಾನಿಯಲ್ ಗಿಲಾನಿ ಹೇಳಿರುವುದಾಗಿ ಡಾಮ್ ಆನ್‌ಲೈನ್ ವರದಿ ಮಾಡಿದೆ.

ರೆಹಮ್ ಖಾನ್ ಮನವಿಯ ಮೇರೆಗೆ ಕಾಕ್‌ಪಿಟ್‌ನಲ್ಲಿ ಕುಳಿತುಕೊಳ್ಳಲು ಪೈಲಟ್ ಅನುಮತಿ ನೀಡಿದ್ದರು ಎಂದು ಗಿಲಾನಿ ತಿಳಿಸಿದ್ದಾರೆ.

'ಕಾನೂನು ಪ್ರಕಾರ ಅನಧಿಕೃತ ವ್ಯಕ್ತಿಗಳು ಕಾಕ್‌ಪಿಟ್ ಪ್ರವೇಶಿಸುವಂತಿಲ್ಲ. ಹೀಗಾಗಿ ನಿಯಮ ಉಲ್ಲಂಘಿಸಿದ ಪೈಲಟ್ ವಿರುದ್ಧ ಪಿಐಎ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com