

ಬೀಜಿಂಗ್: ಹೆಚ್ಚುತ್ತಿರುವ ವಯೋವೃದ್ಧರ ಸಂಖ್ಯೆ ಮತ್ತು ಕ್ಷೀಣಿಸುತ್ತಿರುವ ದುಡಿಯುವ ತಲೆಮಾರಿನ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಚೀನಾ ತನ್ನ ದಶಕಗಳ ಹಳೆಯ ಒಂದು ಮಗು ನೀತಿ ಸಡಿಲಿಸುವ ಮೂಲಕ 2ನೇ ಮಗು ಪಡೆಯಲು ದಂಪತಿಗಳಿಗೆ ಉತ್ತೇಜಿಸಲು ಮುಂದಾಗಿದೆ.
ದೇಶದಲ್ಲಿ ದುಡಿಮೆಯ ವಯೋಮಾನ ದಾಟಿದ ವಯಸ್ಕರ ಸಂಖ್ಯೆ ಈಗಾಗಲೇ 20 ಕೋಟಿ ದಾಟಿದ್ದು, ವಯೋವೃದ್ಧರ ಸಂಖ್ಯೆ ಹೆಚ್ಚುತ್ತಿರುವುದು ದೇಶದ ಅಭಿವೃದ್ಧಿಗೆ ಪೆಟ್ಟು ನೀಡುತ್ತಿದೆ ಎಂಬುದನ್ನು ಗ್ರಹಿಸಿರುವ ಚೀನಾ ಈ ನಿರ್ಧಾರಕ್ಕೆ ಬಂದಿದೆ ಎಂದು ಅಲ್ಲಿನ ಅಧಿಕೃತ ಮಾಧ್ಯಮ ವರದಿ ಮಾಡಿದೆ. ಚೀನಾದ 29 ಪ್ರಾಂತ್ಯಗಳು ಈಗಾಗಲೇ ದಂಪತಿ ಎರಡನೇ ಮಗು ಹೊಂದಬಹುದು ಎಂದು ವಿನಾಯಿತಿ ನೀಡಿವೆ.