ಫುಟ್ಬಾಲ್ ಪಂದ್ಯ ರದ್ದು ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮಂಗಳ ವಾರ ನಡೆಯಬೇಕಿದ್ದ ಜರ್ಮನಿ ನೆದರ್ಲೆಂಡ್ ಫುಟ್ಬಾಲ್ ಪಂದ್ಯ ರದ್ದು ಮಾಡಲಾಯಿತು. ಮಂಗಳವಾರ ರಾತ್ರಿ ಬರ್ಲಿನ್‍ನ ಹ್ಯಾನೋವರ್‍ನ ಸ್ಟೇಡಿಯಂಗೆ ಪಂದ್ಯ ವೀಕ್ಷಿಸಲೆಂದು ಜನ ಮುಗಿಬಿದ್ದಿದ್ದರು. ಆದರೆ, ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ, 20 ನಿಮಿಷಗಳಲ್ಲೇ ಅವರೆಲ್ಲರನ್ನೂ ಹೊರಗೆ ಕಳುಹಿಸಲಾಯಿತು. ಪಂದ್ಯ ವೀಕ್ಷಿಸಲೆಂದು ಹ್ಯಾನೋವರ್ ಏರ್ ಪೋರ್ಟ್ ಬಂದಿಳಿದಿದ್ದ ಜರ್ಮನಿ ಪ್ರಧಾನಿ ಮರ್ಕೆಲ್ ಅವರೂ ಅಲ್ಲಿಂದಲೇ ವಾಪಸಾದರು. ಆದರೆ, ಸತತ ಶೋಧ ಕಾರ್ಯ ನಡೆಸಿದರೂ ಯಾವುದೇ ಸ್ಫೋಟಕಗಳು ಪತ್ತೆಯಾಗಲಿಲ್ಲ.