ಭಾರತದ 13 ಯೋಧರನ್ನು ಬಿಡುಗಡೆ ಮಾಡಿದ ನೇಪಾಳ

ಭಾರತದ ಸೀಮಾ ಸಶಸ್ತ್ರ ಬಲದ (ಎಸ್​ಎಸ್​ಬಿ) 13 ಯೋಧರನ್ನು ನೇಪಾಳ ಬಿಡುಗಡೆ ಮಾಡಿದ್ದಾರೆ...
ಎಸ್ಎಸ್ಬಿ ಯೋಧರು
ಎಸ್ಎಸ್ಬಿ ಯೋಧರು
Updated on: 
ಕಾಠ್ಮಂಡು: ಭಾರತದ ಸೀಮಾ ಸಶಸ್ತ್ರ ಬಲದ (ಎಸ್​ಎಸ್​ಬಿ) 13 ಯೋಧರನ್ನು ನೇಪಾಳ ಬಿಡುಗಡೆ ಮಾಡಿದ್ದಾರೆ. 
ಭಾರತ-ನೇಪಾಳ ಗಡಿಯಲ್ಲಿ ಡಿಸೆಲ್ ಕಳ್ಳಸಾಗಾಣಿಕೆ ತಡೆಗಟ್ಟಲು ಪ್ರಯತ್ನಿಸುತ್ತಿದ್ದ ಭಾರತೀಯ ಯೋಧರು ನೇಪಾಳದ ಗ್ರಾಮವನ್ನು ಪ್ರವೇಶಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಹಿಡಿದಿದ್ದ ಗ್ರಾಮಸ್ಥರು ನೇಪಾಳದ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಭಾರತ-ನೇಪಾಳ ಗಡಿಯಲ್ಲಿರುವ ಕಿಶನ್​ಗಂಜ್ ಜಿಲ್ಲೆಯಲ್ಲಿ ಡಿಸೆಲ್ ಕಳ್ಳಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಭಾನುವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ಎಸ್​ಎಸ್​ಬಿ ಯೋಧರು ಕಳ್ಳಸಾಗಾಣಿಕೆ ತಂಡದವರನ್ನು ಬೆನ್ನಟ್ಟಿ ಹೋಗಿದ್ದರು. ಈ ಸಂದರ್ಭದಲ್ಲಿ ಅವರು ನೇಪಾಳ ಗಡಿಯನ್ನು ಪ್ರವೇಶಿಸಿದ್ದರು. ಇದನ್ನು ಕಂಡ ನೇಪಾಳದ ಗ್ರಾಮಸ್ಥರು ಯೋಧರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com