

ವಾಷಿಂಗ್ಟನ್: ಪೂರ್ವ ಅಪಘಾನಿಸ್ತಾನದಲ್ಲಿ ಅಮೆರಿಕದ ಪ್ರಯಾಣಿಕ ವಿಮಾನವೊಂದನ್ನು ತಾಲಿಬಾನ್ ಉಗ್ರರು ಹೊಡೆದುರುಳಿಸಿದ್ದು, 11 ಮಂದಿ ಮೃತಪಟ್ಟಿದ್ದಾರೆ.
ಉಗ್ರರು ಮೇಲುಗೈ ಸಾಧಿಸಲು ಯತ್ನಿಸುತ್ತಿರುವ ಜಲಾಲಾಬಾದ್ ನಗರದವ್ಯಾಪ್ತಿ ಯಲ್ಲಿ ಈ ಘಟನೆ ನಡೆದಿದೆ. ಸತ್ತವರಲ್ಲಿ ಐವರು ಪ್ರಯಾಣಿಕರು ಹಾಗೂ 6 ಮಂದಿ ಅಮೆರಿಕನ್ ಸೇನಾಸಿಬ್ಬಂದಿ. ಪತನದ ಕಾರಣವನ್ನು ಪೆಂಟಗನ್ ತಿಳಿಸಿಲ್ಲವಾದರೂ, ತಾಲಿಬಾನ್ ಮೂಲಗಳು ಇದು ತಮ್ಮದೇ ಕೃತ್ಯ ಎಂದು ಹೇಳಿ ಕೊಂಡಿವೆ.
ಕುಂದುಜ್ ನಗರದ ಅಧಿಪತ್ಯಕ್ಕಾಗಿ ನ್ಯಾಟೋ ಪಡೆಗಳು ಹಾಗೂ ತಾಲಿಬಾನ್ ನುಸು ಳುಕೋರರ ನಡುವೆ ಸಮರ ಉಲ್ಬಣಿಸಿದ್ದು, ಈ ದಾಳಿ ಅದಕ್ಕೆ ಸಂಬಂಧಿಸಿದೆ. ಸೋಮವಾರ ಕುಂದುಜ್ ಅನ್ನು ತಾಲಿಬಾನ್ ವಶಪಡಿಸಿಕೊಂಡಿತ್ತು.