

ಬೀಜಿಂಗ್: ಪೂರ್ವ ಚೀನಾದ ರೆಸ್ಟೋರೆಂಟ್ ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದರ ಪರಿಣಾಮ 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಜಿಂಘು ಜಿಲ್ಲೆಯ ವೂಹೂ ನಗರದಲ್ಲಿರು ರೆಸ್ಟೋರೆಂಟ್ ನಲ್ಲಿ ಸಿಲಿಂಡರ್ ಸ್ಪೋಟಗೊಂಡಿರುವುದಾಗಿ ತಿಳಿದುಬಂದಿದೆ.
ರೆಸ್ಟೋರೆಂಟ್ ನಲ್ಲಿ ಸ್ಪೋಟ ಸಂಭವಿಸುವ ಶಬ್ಧ ಕೇಳಿ ಬರುತ್ತಿದ್ದಂತೆ ಸ್ಥಳೀಯರು ರೆಸ್ಟೋರೆಂಟ್ ಬಳಿ ಧಾವಿಸಿದ್ದಾರೆ. ಈ ವೇಳೆ ಸ್ಥಳೀಯರು ಬೆಂಕಿ ನಂದಿಸುಲು ಪ್ರಯತ್ನ ನಡೆಸಿದ್ದಾರೆ. ಆದರೆ, ಸ್ಥಳದಲ್ಲಿ ಸಾಕಷ್ಟು ಹೊಗೆ ಇದ್ದ ಕಾರಣ ಇದು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬ ಮಾಹಿತಿ ನೀಡಿದ್ದಾರೆ.