

ಬೇರತ್: ಕೇಂದ್ರ ಸಿರಿಯಾದ ಮೇಲೆ ರಷ್ಯಾದ ಪಡೆಗಳು ದಾಳಿಯನ್ನು ತೀವ್ರಗೊಳಿಸಿವೆ. ಈ ವೇಳೆ ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅಮೆರಿಕದ ವಿರುದ್ಧ
ಹರಿಹಾಯ್ದಿದ್ದಾರೆ.
ಸಿರಿಯಾದ ವಿರುದ್ಧ ದಾಳಿ ಮಾಡುತ್ತಿದ್ದರೂ ಆ ದೇಶ ಸಹಕರಿಸುತ್ತಿಲ್ಲ ಎಂದು ದೂರಿದ್ದಾರೆ. ರಷ್ಯಾದ ಪಡೆಗಳು ಉತ್ತರ ಭಾಗದಲ್ಲಿನ ನಗರ ಹಾಮ್ಸ್ ಮೇಲೆ ದಾಳಿ ಮಾಡಿವೆ. ಇಲ್ಲಿ ಕೆಲವೊಂದು ಹಳ್ಳಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ. ಇದೇ ವೇಳೆ ರಷ್ಯಾ ಪಡೆಗಳ ದಾಳಿ ವಿರೋಧಿಸಿರುವ ಅಮೆರಿಕ, ನೆರೆಯ ದೇಶಗಳ ಸೌರ್ವಭೌಮತ್ವಕ್ಕೆ ರಷ್ಯಾ ಅಡ್ಡಿ ಪಡಿಸುತ್ತಿದೆ ಎಂದು ದೂರಿದೆ.
ರಷ್ಯಾವು ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಅಸ್ತ್ರಗಳನ್ನು ಬಳಸಿಕೊಂಡು ಸಿರಿಯಾದಂಥ ದೇಶದ ಸೌರ್ವಭೌಮತ್ವಕ್ಕೆ ಅಡ್ಡಿ ಮಾಡಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಶ್ಟನ್ ಕಾರ್ಟರ್ ಆರೋಪಿಸಿದ್ದಾರೆ.