ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮುಸ್ಲಿಮರಂತೆ!

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮುಂದುವರಿದಿರುವ ಬರಾಕ್ ಒಬಾಮ ಧರ್ಮದ ಬಗ್ಗೆ ಇವತ್ತಿಗೂ ಅಮೆರಿಕನ್ನರಲ್ಲಿ ಅನುಮಾನಗಳು ಬಗೆಹರಿದಿಲ್ಲ. ಅದರಲ್ಲೂ ಒಬಾಮ ಅವರ ಪ್ರತಿಪಕ್ಷವಾದ ರಿಪಬ್ಲಿಕನ್ ಪಕ್ಷದ ವಲಯದಲ್ಲಂತೂ ಶೇ.50ಕ್ಕಿಂತ ಹೆಚ್ಚು ಮಂದಿ ಒಬಾಮ ಅವರನ್ನು ಮುಸ್ಲಿಂ ಎಂದೇ ಭಾವಿಸಿದ್ದಾರೆ!
ಪಬ್ಲಿಕ್ ಪಾಲಿಸಿ ಪೋಲಿಂಗ್ ಎಂಬ ಸಂಸ್ಥೆ ನಡೆಸಿದ ರಿಪಬ್ಲಿಕನ್ನರ ಸಮೀಕ್ಷೆ ಈ ಮಾಹಿತಿಯನ್ನು ಹೊರಗೆಡವಿದ್ದು, ಶೇ.54ರಷ್ಟು ರಿಪಬ್ಲಿಕನ್ನರು ಒಬಾಮ ಮುಸ್ಲಿಂ ಎಂದೇ ನಂಬುತ್ತಾರೆ. ಶೇ,32 ಮಂದಿಗೆ ತಮ್ಮ ದೇಶದ ಅಧ್ಯಕ್ಷರದ್ದು ಯಾವ ಧರ್ಮ ಎಂಬುದೇ ತಿಳಿದಿಲ್ಲ.
ಇನ್ನೂ ವಿಚಿತ್ರವೆಂದರೆ, ಒಬಾಮ ಕ್ರೈಸ್ತ ಧರ್ಮದವರು ಎಂದು ನಂಬಿರುವ ರಿಪಬ್ಲಿಕನ್ನರ ಸಂಖ್ಯೆ ಕೇವಲ ಶೇ.14. ಅಮೆರಿಕ ಅಧ್ಯಕ್ಷರ ಪರಂಪರೆಯಲ್ಲೇ ಅತ್ಯಂತ ಜನಪ್ರಿಯ ಅಧ್ಯಕ್ಷರಲ್ಲಿ ಒಬ್ಬರು ಎನ್ನ ಲಾದ ಒಬಾಮ ಅವರ ಜನ್ಮಸ್ಥಳದ ಬಗ್ಗೆ ಕೂಡ ಆ ದೇಶದ ರಿಪಬ್ಲಿಕನ್ನರಲ್ಲಿ ಹಲವು ಗೊಂದಲಗಳು ಮುಂದುವರಿದಿದೆ.
ಶೇ.44 ಮಂದಿ ಅವರು ಅಮೆರಿಕದಲ್ಲಿ ಹುಟ್ಟಿದವರಲ್ಲ ಎಂದು ಕೊಂಡಿದ್ದರೆ, ಶೇ.35ಕ್ಕಿಂತ ಕಡಿಮೆ ಮಂದಿ ಮಾತ್ರ ಒಬಾಮ ಅಮೆರಿಕಜಾತ ಎಂದು ಕೊಂಡಿದ್ದಾರೆ. ಇನ್ನುಳಿದವರಿಗೆ ಹುಟ್ಟಿದ ಸ್ಥಳದ ಮಾಹಿತಿ ಇಲ್ಲ ಎಂದು ಸಮೀಕ್ಷೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


