5 ಡೆಟ್ರಾಯಿಟ್ ಪೊಲೀಸ್ ನಾಯಿಗಳಿಗೆ ಬುಲೆಟ್ ನಿರೋಧಿ ಜಾಕೆಟ್ ಗಳು

ಥಾರ್, ಬೆನ್, ಆಗ್ರೋ, ಡ್ಯೂಕ್ ಮತ್ತು ಗಿಮ್ಮಿ ಡೆಟ್ರಾಯಿಟ್ ನಲ್ಲಿ ಅಪರಾಧಗಳನ್ನು ತಡೆಯಲು ಹೆಚ್ಚಿನ ರಕ್ಷಣಾ ಕವಚ ಪಡೆಯಲಿವೆ.
5 ಡೆಟ್ರಾಯಿಟ್ ಪೊಲೀಸ್ ನಾಯಿಗಳಿಗೆ ಬುಲೆಟ್ ನಿರೋಧಿ ಜಾಕೆಟ್ ಗಳು
5 ಡೆಟ್ರಾಯಿಟ್ ಪೊಲೀಸ್ ನಾಯಿಗಳಿಗೆ ಬುಲೆಟ್ ನಿರೋಧಿ ಜಾಕೆಟ್ ಗಳು
Updated on
ಡೆಟ್ರಾಯಿಟ್: ಥಾರ್, ಬೆನ್, ಆಗ್ರೋ, ಡ್ಯೂಕ್ ಮತ್ತು ಗಿಮ್ಮಿ ಡೆಟ್ರಾಯಿಟ್ ನಲ್ಲಿ ಅಪರಾಧಗಳನ್ನು ತಡೆಯಲು ಹೆಚ್ಚಿನ ರಕ್ಷಣಾ ಕವಚ ಪಡೆಯಲಿವೆ. 
ಅಮೆರಿಕಾದ ಡೆಟ್ರಾಯಿಟ್ ಪೊಲೀಸ್ ಇಲಾಖೆಯ ಕೆನೈನ್ ವಿಭಾಗದ 9 ಪೊಲೀಸ್ ನಾಯಿಗಳಲ್ಲಿ ಈ ಐದು ನಾಯಿಗಳಿಗೆ ಬುಲೆಟ್ ನಿರೋಧಿ ಕವಚ ಹಾಗಾಲಾಗಿದೆ. ಇದು ಡೆಟ್ರಾಯಿಟ್ ಮೂಲದ ಸಂಸ್ಥೆಯೊಂದು ನೀಡಿರುವ ದೇಣಿಗೆ. 
"ಇದು ನಮಗೆ ಹೆಚ್ಚಿನ ಸಂತಸ ಅಥವಾ ಥ್ರಿಲ್ ತಂದಿದೆ ಎಂದೇನಿಲ್ಲ" ಎಂದಿರುವ ಪೊಲೀಸ್ ವಕ್ತಾರ ಸರ್ಜೆಂಟ್ ಮೈಕೆಲ್ ವುಡಿ "ಅವುಗಳಿಗೆ ತರಬೇತಿ ನೀಡಲಾಗುವುದು" ಎಂದಿದ್ದಾರೆ. 
1000 ಡಾಲರ್ ಬೆಲೆ ಬಾಳುವ ಈ ಕವಚಗಳನ್ನು ಸ್ಟ್ರಾಟೆಜಿಕ್ ಸ್ಟಾಫಿನ್ಗ್ ಸೊಲ್ಯೂಷನ್ಸ್ ಎಂಬ ಸಂಸ್ಥೆ ದೇಣಿಗೆ ನೀಡಿದೆ. 
ಡೆಟ್ರಾಯಿಟ್ ನ ಈ ಒಂಭತ್ತು ಪೊಲೀಸ್ ನಾಯಿಗಳು ಸ್ಫೋಟಕಗಳು ಮತ್ತು ಡ್ರಗ್ ಗಳನ್ನು ಪತ್ತೆ ಹಚ್ಚುವಲ್ಲಿ ಪರಿಣಿತಿ ಪಡೆದಿವೆ. ಉಳಿದ ನಾಯಿಗಳಿಗೂ ಕವಚಗಳನ್ನು ಒದಗಿಸುವ ಯೋಜನೆ ಇದೆ ಎಂದು ವುಡಿ ಹೇಳಿದ್ದಾರೆ. 
"ಈ ದೇಶದಲ್ಲಿ ಎಲ್ಲ ಪೊಲೀಸ್ ಇಲಾಖೆಗೂ ಬಜೆಟ್ ತೊಂದರೆ ಇದೆ" ಎಂದಿರುವ ವುಡಿ "ನಮ್ಮ ನಾಯಿಗಳಿಗೆ ಬುಲೆಟ್ ನಿರೋಧಿ ಜಾಕೆಟ್ ಗಳನ್ನೂ ಒದಗಿಸುವ ಯೋಜನೆ ನಮ್ಮ ಬಜೆಟ್ ನಲ್ಲಿಲ್ಲ" ಎಂದಿದ್ದಾರೆ. 
"ಈ ಸಂಸ್ಥೆ ನೀಡಿರುವ ದೇಣಿಗೆಗೆ ನಾವು ಋಣಿ" ಎಂದು ಕೂಡ ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com