ಇತ್ತೀಚೆಗಷ್ಟೇ ತೈವಾನ್ ರಾಷ್ಟ್ರಾಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ್ದ ಡೊನಾಲ್ಡ್ ಟ್ರಂಪ್ ಅವರ ನಡೆ ಹಾಗೂ ಅದಕ್ಕೆ ಪ್ರತಿಯಾಗಿ ಚೀನಾ ದಕ್ಷಿಣ ಚೀನಾ ಸಮುದ್ರದ ಬಳಿ ಅಮೆರಿಕದ ಡ್ರೋನ್ ಗಳನ್ನು ಹಿಡಿದಿದ್ದನ್ನು ಉಲ್ಲೇಖಿಸಿರುವ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಅಮೆರಿಕಗೆ ಕಲಿಸಿದ ಪಾಠವನ್ನು ನೋಡಿ ಭಾರತವೂ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದೆ.