ಢಾಕಾದಲ್ಲಿ ದಾಳಿ ನಡೆಸಿದ ಉಗ್ರರೆಲ್ಲರೂ ಬಾಂಗ್ಲಾ ಪ್ರಜೆಗಳು!

ಢಾಕಾ ಉಗ್ರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದ್ದು ದಾಳಿ ನಡೆಸಿದ ಎಲ್ಲಾ ಉಗ್ರರು ಬಾಂಗ್ಲಾದ ಪ್ರಜೆಗಳೇ ಎಂದು ತನಿಖಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಢಾಕಾದಲ್ಲಿ ದಾಳಿ ನಡೆಸಿದ ಉಗ್ರರೆಲ್ಲರೂ ಬಾಂಗ್ಲಾ ಪ್ರಜೆಗಳು!
ಢಾಕಾದಲ್ಲಿ ದಾಳಿ ನಡೆಸಿದ ಉಗ್ರರೆಲ್ಲರೂ ಬಾಂಗ್ಲಾ ಪ್ರಜೆಗಳು!

ಢಾಕಾ: ಢಾಕಾ ಉಗ್ರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದ್ದು ದಾಳಿ ನಡೆಸಿದ ಎಲ್ಲಾ ಉಗ್ರರು ಬಾಂಗ್ಲಾದ ಪ್ರಜೆಗಳೇ ಎಂದು ತನಿಖಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.  

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ದಾಳಿ ನಡೆಸಿದ ಉಗ್ರರ ಪೈಕಿ ಐವರು ಉಗ್ರರನ್ನು ಪೊಲೀಸರು ಈ ಹಿಂದೆಯೇ ಬಂಧಿಸಲು ಯತ್ನಿಸಿದ್ದರು ಎಂದು ತಿಳಿದುಬಂದಿದ್ದು ಉಗ್ರರ ಬಳಿ ಒತ್ತೆಯಾಳುಗಳಾಗಿದ್ದ 20 ಜನರನ್ನು ದಾಳಿ ನಡೆದ 11 ಗಂಟೆಗಳ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಐಜಿ ಶಾಹಿದುಲ್ -ಹಕ್ ತಿಳಿಸಿದ್ದಾರೆ.

ದಾಳಿ ನಡೆದ ಬೆನ್ನಲ್ಲೇ, ಅಲ್-ಖೈದಾ ಉಗ್ರ ದಾಳಿಯನ್ನು ಶಂಕಿಸಲಾಗಿತ್ತು ಆದರೆ ದಾಳಿಯ ಬಗ್ಗೆ ಇಸೀಸ್ ವೆಬ್ ಸೈಟ್ ನಲ್ಲಿ ಫೋಟೋಗಳು ಕಂಡುಬಂದಿರುವುದರಿಂದ ಇದು ಇಸೀಸ್ ಉಗ್ರ ಸಂಘಟನೆ ನಡೆಸಿರುವ ದಾಳಿ ಎಂದು ಹೇಳಲಾಗುತ್ತಿದೆ. ದಾಳಿ ನಡೆಸಿದ ಉಗ್ರರ ಪೈಕಿ 6 ಜನ ಉಗ್ರರನ್ನು ಹತ್ಯೆ ಮಾಡಕಾಗುದ್ದರೆ ಓರ್ವ ಉಗ್ರನನ್ನು ಜೀವಂತ ಸೆರೆ ಹಿಡಿಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com