ಹಸಿವು ನಿರ್ಮೂಲನೆಗೆ ದಶ ವಾರ್ಷಿಕ ಯೋಜನೆ ರೂಪಿಸಿದ ನೇಪಾಳ

ದೇಶದಲ್ಲಿ ೨೦೧೫ರವೇಳೆಗೆ ಹಸಿವನ್ನು ನಿರ್ಮೂಲನೆ ಮಾಡಲು ನೇಪಾಳ ಸರ್ಕಾರ ದಶ ವಾರ್ಷಿಕ ಯೋಜನೆಯನ್ನು ರೂಪಿಸಿದೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಖಟ್ಮಂಡು: ದೇಶದಲ್ಲಿ ೨೦೧೫ರವೇಳೆಗೆ ಹಸಿವನ್ನು ನಿರ್ಮೂಲನೆ ಮಾಡಲು ನೇಪಾಳ ಸರ್ಕಾರ ದಶ ವಾರ್ಷಿಕ ಯೋಜನೆಯನ್ನು ರೂಪಿಸಿದೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.

ನೇಪಾಳ ಮತ್ತು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ ಎ ಒ) ಈ ಅಭಿಯಾನಕ್ಕಾಗಿ ಕೈಜೋಡಿಸಿವೆ ಎಂದು ಎಫ್ ಎ ಒ ಹೇಳಿಕೆಯನ್ನಾಧರಿಸಿ ಮಾಧ್ಯವೊಂದು ವರದಿ ಮಾಡಿದೆ.

ನೇಪಾಳದ ಶೂನ್ಯ ಹಸಿವು ಅಭಿಯಾನವನ್ನು (೨೦೧೬-೨೦೨೫) ನೇಪಾಳದ ಪ್ರಧಾನಿ ಕೆ ಪಿ ಶರ್ಮ ಓಲಿ ಮತ್ತು ಎಫ್ ಎ ಒ ಪ್ರಧಾನ ನಿರ್ದೇಶಕ ಜೋಸ್ ಗಾಜಿನೋ ದ ಸಿಲ್ವಾ ಜಂಟಿಯಾಗಿ ಖಟ್ಮಂಡುವಿನಲ್ಲಿ ಚಾಲನೆ ನೀಡಿದ್ದಾರೆ.

ಅವಧಿಗೆ ಮುಂಚಿತವಾಗಿಯೇ ಈ ಗುರಿ ಮುಟ್ಟಲು ನೇಪಾಳ ಬದ್ಧವಾಗಿದೆ ಎಂದು ನೇಪಾಳದ ಪ್ರಧಾನಿ ಹೇಳಿದ್ದಾರೆ.

ಈ ಯೋಜನೆಯ ರೂಪುರೇಶಗಳ ಪ್ರಕಾರ ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಳ, ನೀರಾವರಿ, ಬರಡು ಭೂಮಿಯ ಉಪಯೋಗ, ವರ್ಷದ ಪೂರ್ಣಾವಧಿಗೆ ಆಹಾರ ಪದಾರ್ಥಗಳ ಲಭ್ಯ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com