ವಿಶ್ವದ ದುಬಾರಿ ಮದುವೆ: ತೈಲ ಉದ್ಯಮಿ ಮಿಖೈಲ್ ಮಗನ ಮದುವೆಗೆ 6500 ಕೋಟಿ ರು. ವೆಚ್ಚ!

ವೈಭವೋಪೇತವಾಗಿ ಮದುವೆಯಾಗಬೇಕೆಂಬ ಭಾವನೆ ಇದೀಗ ಎಲ್ಲರ ಮನದಲ್ಲಿ ಬೇರು ಬಿಟ್ಟಿವೆ. ಅದರಲ್ಲೂ ಪೋಷಕರು ಬಡತನದಲ್ಲೂ ತಮ್ಮ ಮಕ್ಕಳ...
ಮದುವೆ
ಮದುವೆ

ಮೊರಾಕ್ಕೊ: ವೈಭವೋಪೇತವಾಗಿ ಮದುವೆಯಾಗಬೇಕೆಂಬ ಭಾವನೆ ಇದೀಗ ಎಲ್ಲರ ಮನದಲ್ಲಿ ಬೇರು ಬಿಟ್ಟಿವೆ. ಅದರಲ್ಲೂ ಪೋಷಕರು ಬಡತನದಲ್ಲೂ ತಮ್ಮ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಲು ಇನ್ನಿಲ್ಲದಂತೆ ಯೋಚಿಸುತ್ತಾರೆ.

ಇದಕ್ಕೆ ಪ್ರಮುಖ ಸಾಕ್ಷಿಯೆಂಬಂತೆ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಕಜಕಿಸ್ತಾನದ ಮೊರಾಕ್ಕೋ ಪಟ್ಟಣದಲ್ಲಿ ವಿಶ್ವದ ಅತ್ಯಂತ ದುಬಾರಿ ವಿವಾಹವೊಂದು ನಡೆದಿದೆ. 2015ರ ಫೋರ್ಬ್ಸ್ ನ ರಷ್ಯಾದ ಶ್ರೀಮಂತ ಕುಳಗಳಲ್ಲಿ 38ನೇ ಸ್ಥಾನಪಡೆದಿದ್ದ ತೈಲ ಉದ್ಯಮಿ ಮಿಖೈಲ್ ಗುಸ್ತಾರಿವ್ ಪುತ್ರ ಸೇದ್​ನ ವಿವಾಹಕ್ಕೆ ಸುಮಾರು 6500 ಕೋಟಿ ರುಪಾಯಿ ವೆಚ್ಚ ಮಾಡಿದ್ದಾರೆ ಎನ್ನಲಾಗಿದೆ.

ತಮ್ಮ ಮಗನ ಮದುವೆಗೆ ಮಿಖೈಲ್ ಹಾಲಿವುಡ್​ನ ಜನಪ್ರಿಯ ಗಾಯಕಿ ಜೆನಿಫರ್ ಲೊಪೆಜ್, ಎನ್ರಿಕ್ ಇಗ್ಲೆಸಿಸ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಸಮಾರಂಭಕ್ಕೆ ಬಹುತೇಕ ಅತಿಥಿಗಳು ರೋಲ್ಸ್ ರಾಯ್ ನಂಥ ಐಷಾರಾಮಿ ಕಾರಿನಲ್ಲೇ ಆಗಮಿಸಿದ್ದರು. ಒಟ್ಟು 600 ಅತಿಥಿಗಳು ಈ ಸಮಾರಂಭದಲ್ಲಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com