ಮಸೂಲ್: ಇರಾಕ್ ನಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಆಪ್ ಇರಾರ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆ ಮೂರು ವಾರಗಳ ಹಿಂದೆ ಸುಮಾರು 300 ಹೆಚ್ಚು ಮಾಜಿ ಪೊಲೀಸರನ್ನು ಹತ್ಯೆ ಮಾಡಿ ಸಾಮೂಹಿಕವಾಗಿ ಸಮಾಧಿ ಮಾಡಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಹೇಳಿದೆ.
ಇರಾನ್ ನ ದಕ್ಷಿಣ ಮಸೂಲ್ ನ ಹಮಾಮ್ ಅಲ್ ಅಲಿಲ್ ನಗರದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ದುಷ್ಕೃತ್ಯ ಎಸಗಿದ್ದಾರೆ. ಈ ಸಾಮೂಹಿಕ ಅತ್ಯಾಕಾಂಡದಲ್ಲಿ ಹಲವರ ಶಿರಚ್ಛೇಧ ಹಾಗೂ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಲ್ಲದೆ ಮಸೂಲ್ ನ ಹಮಾಮ್ ಅಲ್ ಅಲಿಲ್ ನಗರದಿಂದ ಉಗ್ರ ಸಂಘಟನೆ ಕಾಲ್ಕಿಳುವ ಒಂದು ವಾರದ ಮುಂಚೆ ಸುಮಾರು 200 ಮಾಜಿ ಪೊಲೀಸರನ್ನು ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿರುವುದಾಗಿ ಸುದ್ದಿ ಸಂಸ್ಥೆಯೊಂದು ತಿಳಿಸಿದೆ.