ಉಜ್ಬೇಕಿಸ್ತಾನದ ಅಧ್ಯಕ್ಷ ಇಸ್ಲಾಂ ಕರಿಮೋವ್ ನಿಧನ

ಮಿದುಳಿನ ರಕ್ತಸ್ತಾವ ತೊಂದರೆಯಿಂದ ಬಳಲುತ್ತಿದ್ದ ಉಜ್ಬೇಕಿಸ್ತಾನದ ಅಧ್ಯಕ್ಷ ಇಸ್ಲಾಂ ಕರಿಮೋವ್ ನಿಧನರಾಗಿದ್ದಾರೆ...
ಇಸ್ಲಾಂ ಕರಿಮೋವ್
ಇಸ್ಲಾಂ ಕರಿಮೋವ್
ತಾಷ್ಕೆಂಟ್: ಮಿದುಳಿನ ರಕ್ತಸ್ತಾವ ತೊಂದರೆಯಿಂದ ಬಳಲುತ್ತಿದ್ದ ಉಜ್ಬೇಕಿಸ್ತಾನದ ಅಧ್ಯಕ್ಷ ಇಸ್ಲಾಂ ಕರಿಮೋವ್ ನಿಧನರಾಗಿದ್ದಾರೆ. 
ಕಠಿಣ ಮುಸ್ಲಿಂ ಕಾನೂನುಗಳ ಮೂಲಕ ಮಧ್ಯ ಏಷ್ಯಾ ರಾಷ್ಟ್ರಗಳ ರಕ್ಷಕ ಎಂದು ಕರೆಸಿಕೊಳ್ಳುತ್ತಿದ್ದ 78 ವರ್ಷದ ಕರಿವೋವ್ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. 
ಉಗ್ರ ಕೃತ್ಯ ಎಸಗುವ ಮುಸ್ಲೀಂರನ್ನು ಗುಂಡು ಹೊಡೆದು ಸಾಯಿಸುತ್ತೇನೆ ಎಂದು ಆಗಾಗ ಗುಡುಗುತ್ತಿದ್ದ ಕರಿಮೋವ್ ಸತತ 25 ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. 
ಸೋವಿಯತ್ ಒಕ್ಕೂಟದಿಂದ ಅಧಿಕಾರ ಕಿತ್ತುಕೊಳ್ಳುವ ಸಂದರ್ಭ 27 ವರ್ಷಗಳ ಕಾಲ ರಾಷ್ಟ್ರದಲ್ಲಿ ಭಾರಿ ಹಿಂಸಾಚಾರ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com