ಸಿರಿಯಾದಲ್ಲಿ ಅಮೆರಿಕ ದಾಳಿ; ಕೇರಳ ಮೂಲದ ಉಗ್ರ ಅಬು ತಾಹಿರ್ ಸಾವು!

ಸಿರಿಯಾದಲ್ಲಿ ಪಾರುಪತ್ಯ ಸಾಧಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಹೆಡೆಮುರಿ ಕಟ್ಟಲು ಅಮೆರಿಕ ಸೇನಾಕಾರ್ಯಚರಣೆ ಮುಂದುವರೆಸಿದ್ದು, ಭಾನುವಾರ ನಡೆದ ದಾಳಿಯಲ್ಲಿ ಭಾರತದ ಕೇರಳ ಮೂಲದ ಉಗ್ರ ಅಬು ತಾಹಿರ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಡಮಾಸ್ಕಸ್: ಸಿರಿಯಾದಲ್ಲಿ ಪಾರುಪತ್ಯ ಸಾಧಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಹೆಡೆಮುರಿ ಕಟ್ಟಲು ಅಮೆರಿಕ ಸೇನಾಕಾರ್ಯಚರಣೆ ಮುಂದುವರೆಸಿದ್ದು, ಭಾನುವಾರ ನಡೆದ ದಾಳಿಯಲ್ಲಿ ಭಾರತದ ಕೇರಳ ಮೂಲದ  ಉಗ್ರ ಅಬು ತಾಹಿರ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಅಬು ತಾಹಿರ್ ಮೂಲತಃ ಕೇರಳದ ಪಾಲ್ಘಾಟ್ ನವನೆಂದು ತಿಳಿದುಬಂದಿದ್ದು, 2013ರಲ್ಲಿ ಉಮ್ರಾಹ್ ಗೆ ತೆರಳಿದ್ದ ತಾಹಿರ್ ಬಳಿಕ ಮನೆಗೆ ವಾಪಸ್ ಆಗಿರಲಿಲ್ಲ. ಬಳಿಕ ಶಾರ್ಜಾದಲ್ಲಿರುವ ಸಂಬಂಧಿಕರಿಗೆ ಏಪ್ರಿಲ್ 4ರಂದು ಸಂದೇಶ  ರವಾನಿಸಿದ್ದ ತಾಹಿರ್ ತಾನು ಉಗ್ರ ಸಂಘಟನೆ ಸೇರಿರುವುದಾಗಿ ಹೇಳಿದ್ದ. ಇದೀಗ ಅಮೆರಿಕ ದಾಳಿಯಲ್ಲಿ ತಾಹಿರ್ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ಇದೇ ಸಿರಿಯಾದಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ದಾಳಿಯಲ್ಲಿ  ಮತ್ತೋರ್ವ ಕೇರಳ ಯುವಕ ಸಾವನ್ನಪ್ಪಿದ್ದ. ಬಳಿಕ ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ  ಅಡಗುದಾಣದ ಮೇಲೆ ಅಮೆರಿಕ ಬೃಹತ್ ಬಾಂಬ್ ಅನ್ನು ಸ್ಫೋಟಿಸಿತ್ತು. ಈ ದಾಳಿಯಲ್ಲಿ ಹತ್ತಾರು ಉಗ್ರರು ಸಾವನ್ನಪ್ಪಿದ್ದರು, ಈ ಪೈಕಿ ಕೇರಳ ಮೂಲದ ಉಗ್ರನೋರ್ವ ಕೂಡ ಸಾವನ್ನಪ್ಪಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com