ಇಸ್ಲಾಮಾಬಾದ್: ಪಂಚರಾಜ್ಯಗಳ ಚುನಾವಣೆ ಬಳಿಕ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ ಎಂದು ಪಾಕಿಸ್ತಾನದ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.
"ಮಾರ್ಚ್ ವೇಳೆಗೆ ಭಾರತದಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯಗೊಳ್ಳಲಿದ್ದು, ನಂತರದ ದಿನಗಳಲ್ಲಿ ಪಾಕಿಸ್ತಾನ- ಭಾರತ ದ್ವಿಪಕ್ಷೀಯ ಮಾತುಕತೆ ನಡೆಸಲು ಸಾಧ್ಯವಾಗಲಿದೆ, ಪಾಕಿಸ್ತಾನ ಮಾತ್ರ ಮಾತುಕತೆ ನಡೆಸುವುದಕ್ಕೆ ಬದ್ಧವಾಗಿದೆ ಎಂದು ಯೋಜನಾ ಮತ್ತು ಅಭಿವೃದ್ಧಿ ಸಚಿವ ಇಕ್ಬಾಲ್ ಹೇಳಿದ್ದಾರೆ.
ಶಾಂತಿಗೆ ಸಂಬಂಧಿಸಿದ ಅಮೆರಿಕಾದ ಥಿಂಕ್ ಟ್ಯಾಂಕ್ ನ ಪ್ರಶ್ನೆಗೆ ಉತ್ತರಿಸಿರುವ ಇಕ್ಬಾಲ್, ಭಾರತದ ವಿಧಾನಸಭಾ ಚುನಾವಣೆಗಳಲ್ಲಿ ಪಾಕಿಸ್ತಾನ ಚುನಾವಣಾ ವಿಷಯವಾಗುವುದಿಲ್ಲ. ಪಾಕಿಸ್ತಾನದಲ್ಲಿ ನಡೆಯುವ ಚುನಾವಣೆಗಳಲ್ಲಿ ಭಾರತದ ಪ್ರಸ್ತಾಪವಾಗುವುದಿಲ್ಲ. ಆದರೆ ಭಾರತದ ಚುನಾವಣೆಗಳಲ್ಲಿ ಪಾಕಿಸ್ತಾನ ಚುನಾವಣಾ ವಿಷಯವಾಗಿರಬಹುದು ಎನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಚುನಾವಣೆ ನಡೆದರೆ ಪಾಕಿಸ್ತಾನ ಚುನಾವಣಾ ವಿಷಯವಾಗಿರಲಿದೆ. ಆದ್ದರಿಂದ ವಿಧಾನಸಭಾ ಚುನಾವಣೆ ನಂತರ ಮಾತುಕತೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಬಹುದೆಂದು ಸಚಿವ ಇಕ್ಬಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.