ಕಿಮ್ ಕಾರ್ದಷಿಯಾನ್ (ಸಂಗ್ರಹ ಚಿತ್ರ)
ಕಿಮ್ ಕಾರ್ದಷಿಯಾನ್ (ಸಂಗ್ರಹ ಚಿತ್ರ)

ನಟಿ ಕಿಮ್ ಕಾರ್ದಷಿಯಾನ್ ಮನೆ ದರೋಡೆ: 16 ಮಂದಿ ಬಂಧನ

ಹಾಲಿವುಡ್ ನಟಿ ಮತ್ತು ಖ್ಯಾತ ಪಾಪ್ ಗಾಯಕಿ ಕಿಮ್ ಕಾರ್ದಷಿಯಾನ್ ಅವರ ಮನೆಯಲ್ಲಿ ದರೋಡೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪ್ಯಾರಿಸ್ ಪೊಲೀಸರು 16 ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಪ್ಯಾರಿಸ್: ಹಾಲಿವುಡ್ ನಟಿ ಮತ್ತು ಖ್ಯಾತ ಪಾಪ್ ಗಾಯಕಿ ಕಿಮ್ ಕಾರ್ದಷಿಯಾನ್ ಅವರ ಮನೆಯಲ್ಲಿ ದರೋಡೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪ್ಯಾರಿಸ್ ಪೊಲೀಸರು 16 ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಕಿಮ್ ಕಾರ್ದಷಿಯಾನ್ ಅವರ ಪ್ಯಾರಿಸ್ ನಿವಾಸದ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳು ನಟಿಯನ್ನು ಕೊಠಡಿಯಲ್ಲಿ ಕಟ್ಟಿ ಹಾಕಿ ಸುಮಾರು 9.5 ಮಿಲಿಯನ್ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು  ಹೊತ್ತು ಪರಾರಿಯಾಗಿದ್ದರು. ಪ್ರಕರಕಣ ಸಂಬಂಧ ತನಿಖೆ ನಡೆಸಿದ್ದ ಪ್ಯಾರಿಸ್ ಪೊಲೀಸರು ಸತತ 3 ತಿಂಗಳ ಬಳಿಕ ಎಲ್ಲ 16 ಮಂದಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವಂತೆ ಇತ್ತೀಚೆಗೆ ಪ್ಯಾರಿಸ್ ಪೊಲೀಸರು ದರೋಡೆ ಗ್ಯಾಂಗ್ ವೊಂದರ ಮೇಲೆ ದಾಳಿ ಮಾಡಿತ್ತು. ಈ ವೇಳೆ ಬಂಧಿತನಾಗಿದ್ದ ಓರ್ವ ಆರೋಪಿಯನ್ನು ವಿಚಾರಣೆ ನಡೆಸಿದಾಗ ಕಿಮ್  ಕಾರ್ದಷಿಯಾನ್ ಅವರ ಮನೆ ಮೇಲೆ ದಾಳಿ ನಡೆಸಿದ್ದ ಕುರಿತು ಮಾಹಿತಿ ನೀಡಿದ್ದ. ಆತನ ಮಾಹಿತಿ ಮೇರೆಗೆ ಇತರೆ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ.

ಕಳೆದ ಅಕ್ಟೋಬರ್ ನಲ್ಲಿ ನಟಿಯ ಮನೆ ಮೇಲೆ ದಾಳಿ ನಡೆಸಿದ್ದ ದುಷ್ಕರ್ಮಿಗಳು ಆಕೆಯನ್ನು ಕಟ್ಟಿಹಾಕಿ ಪಿಸ್ತೂಲ್ ನಿಂದ ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಅಂತೆಯೇ ಸುಮಾರು 9.5 ಮಿಲಿಯನ್ ಮೊತ್ತದ ಚಿನ್ನಾಭರಣ ದೋಚಿ  ಪರಾರಿಯಾಗಿದ್ದರು. ಈ ಪ್ರಕರಣ ಹಾಲಿವುಡ್ ಸೇರಿದಂತೆ ವಿಶ್ವಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com