ಟ್ರಂಪ್ ವಲಸೆ ನೀತಿ ವಿರೋಧಿಸಿದ್ದ ಅಟಾರ್ನಿ ಜನರಲ್ ವಜಾ!

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಗೆ ಸೆಡ್ಡು ಹೊಡೆದು ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಹಂಗಾಮಿ ಅಟಾರ್ನಿ ಜನರಲ್ ಸ್ಯಾಲಿಯೇಟ್ಸ್ ಅವರನ್ನು ಸರ್ಕಾರ ವಜಾಗೊಳಿಸಿ ಆದೇಶ ಹೊರಡಿಸಿದೆ.
ಒಬಾಮ ಮತ್ತು ಸ್ಯಾಲಿಯೇಟ್ಸ್
ಒಬಾಮ ಮತ್ತು ಸ್ಯಾಲಿಯೇಟ್ಸ್
Updated on: 

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಗೆ ಸೆಡ್ಡು ಹೊಡೆದು ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಹಂಗಾಮಿ ಅಟಾರ್ನಿ ಜನರಲ್ ಸ್ಯಾಲಿಯೇಟ್ಸ್ ಅವರನ್ನು ಸರ್ಕಾರ ವಜಾಗೊಳಿಸಿ ಆದೇಶ ಹೊರಡಿಸಿದೆ. ಅಂತೆಯೇ ಅವರ ಸ್ಥಾನಕ್ಕೆ ಡಾನಾ ಬೊಯಂಟೆ ಅವರನ್ನು ನೇಮಕ ಮಾಡಲಾಗಿದೆ.

ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಾವಧಿಯಲ್ಲಿ ಅಟಾರ್ನಿ ಜನರಲ್ ಆಗಿ ನೇಮಕವಾಗಿದ್ದ ಸ್ಯಾಲಿಯೇಟ್ಸ್ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಯನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಅಲ್ಲದೆ  ಕಾರ್ಯಕ್ರಮವೊಂದರಲ್ಲಿ ಟ್ರಂಪ್‌ ಅವರ ವಲಸೆ ನಿಷೇಧ ಆದೇಶವನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅಂತೆಯೇ ಸೋಮವಾರ ಅಮೆರಿಕದ ನ್ಯಾಯಾಂಗ ಇಲಾಖೆಯ ವಕೀಲರಿಗೆ ಪತ್ರ ಬರೆದು ನಿರಾಶ್ರಿತರು  ಅಮೆರಿಕ ಪ್ರವೇಶಿಸುವುದಕ್ಕೆ ಅಧ್ಯಕ್ಷ ಟ್ರಂಪ್‌ ಹೇರಿರುವ 120 ದಿನಗಳ ತಡೆ, ಸಿರಿಯಾದಿಂದ ಬರುತ್ತಿರುವ ನಿರಾಶ್ರಿತರ ಮೇಲಿನ ಶಾಶ್ವತ ತಡೆ ಹಾಗೂ ಇರಾಕ್‌, ಇರಾನ್‌, ಲಿಬಿಯಾ, ಸೊಮಾಲಿಯಾ, ಸುಡಾನ್‌, ಯೆಮೆನ್‌  ದೇಶಗಳಿಂದ ವಲಸೆ ಬರುತ್ತಿರುವವರ ಮೇಲಿನ 90 ದಿನಗಳ ನಿಷೇಧವನ್ನು ತಾವು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅಧ್ಯಕ್ಷ  ಟ್ರಂಪ್‌'ಗೆ ನೇರ ಸೆಡ್ಡು ಹೊಡೆದಿದ್ದರು. ಇದೇ ಕಾರಣಕ್ಕೆ ಸ್ಯಾಲಿಯೇಟ್ಸ್  ಅವರನ್ನು ವಜಾ ಮಾಡಲಾಗಿದ್ದು, ಹಿರಿಯ ವಕೀಲರಾದ  ಡಾನಾ ಬೊಯಂಟೆ ಅವರನ್ನು ನೇಮಕ ಮಾಡಲಾಗಿದೆ.

ಈ ಬಗ್ಗೆ ಶ್ವೇತಭವನ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ಪ್ರಸ್ತುತ ವರ್ಜಿನಿಯಾದ ಅಟಾರ್ನಿ ಜನರಲ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾನಾ ಬೊಯಂಟೆ  ಅವರು ಅಮೆರಿಕ ಸರ್ಕಾರದ ಪರ ವಕೀಲರಾಗಿ ನೇಮಕವಾಗಿದ್ದಾರೆ  ಎಂದು ಹೇಳಿದೆ.

ಇನ್ನು ಮುಸ್ಲೀಮರೇ ಹೆಚ್ಚಾಗಿರುವ 7 ಮುಸ್ಲಿಂ ರಾಷ್ಟ್ರಗಳ ನಾಗರಿಕರ ಅಮೆರಿಕ ಪ್ರವೇಶದ ಮೇಲೆ ನಿರ್ಬಂಧ ಹೇರುವ ಟ್ರಂಪ್ ಸರ್ಕಾರದ ಆದೇಶ ಇದೀಗ ವಿವಾದದ ಸ್ವರೂಪ ಪಡೆದಿದ್ದು, ಟ್ರಂಪ್ ವಿರುದ್ಧ ಈಗಾಗಲೇ  ಅಮೆರಿಕದಾದ್ಯಂತ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಸಿರಿಯಾ, ಲಿಬಿಯಾ, ಇರಾಕ್, ಇರಾನ್, ಯೆಮೆನ್, ಸೋಮಾಲಿಯಾ ಮತ್ತು ಸುಡಾನ್ ರಾಷ್ಟ್ರಗಳ ನಾಗರಿಕರ ಮೇಲೆ ನಿರ್ಬಂಧ ಕಾಯ್ದೆ ವಿರುದ್ಧ ಅಮೆರಿಕದ ರಾಜಕೀಯ  ತಜ್ಞರು ಧ್ವನಿ ಎತ್ತಿದ್ದು, ಅಟಾರ್ನಿ ಜನರಲ್ ಸ್ಯಾಲಿಯೇಟ್ಸ್ ಕೂಡ ಇದರ ವಿರುದ್ಧ ಧ್ವನಿ ಎತ್ತಿದ್ದರು. ಇದೀಗ ಸ್ಯಾಲಿಯೇಟ್ಸ್ ಅವರನ್ನು ಕರ್ತವ್ಯದಿಂದ ವಜಾ ಮಾಡಲಾಗಿದ್ದು, ಅಮೆರಿಕ ಸರ್ಕಾರದ ಈ ನಿರ್ಧಾರ ಕೂಡ ವ್ಯಾಪಕ  ವಿರೋಧಕ್ಕೆ ಕಾರಣವಾಗಿದೆ.

ಟ್ರಂಪ್ ಆದೇಶದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ತಾವೂ ಕೂಡ ಬೆಂಬಲ ನೀಡುವುದಾಗಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಘೋಷಣೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com