ಸಿಕ್ಕಿಂ ಬಿಕ್ಕಟ್ಟು: ಭಾರತ ಪಂಚಶೀಲ ತತ್ವ ಉಲ್ಲಂಘಿಸಿದೆ ಎಂದ ಚೀನಾ

Published On :
ಬೀಜಿಂಗ್: ಸಿಕ್ಕಿಂನಲ್ಲಿ ಭಾರತ - ಚೀನಾ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಭಾರತವೇ ಪಂಚಶೀಲ ತತ್ವವನ್ನು ಉಲ್ಲಂಘಿಸಿದೆ ಎಂದು ಬುಧವಾರ ಚೀನಾ ಆರೋಪಿಸಿದೆ. ಅಲ್ಲದೆ ಈ ಕೂಡಲೇ ಭಾರತ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಮೂಲಕ ತಪ್ಪು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಸಿಕ್ಕಿಂ ಸೆಕ್ಟರ್ ನ ಚಿಕನ್ ನೆಕ್ ಸಮೀಪ ಚೀನಾ ಸೇನಾಪಡೆಗಳು ರಸ್ತೆ ನಿರ್ಮಿಸುತ್ತಿವೆ ಎಂದು ಭಾರತ ಜನತೆಗೆ ತಪ್ಪು ಮಾಹಿತಿ ನೀಡುತ್ತಿರುವುದಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಅವರು ದೂರಿದ್ದಾರೆ.
'ಭಾರತ– ಚೀನಾ ನಡುವೆ ಶಾಂತಿ ಸೌಹಾರ್ದದ ಉದ್ದೇಶದಿಂದ ಆದ ಪಂಚಶೀಲತತ್ವ ಒಪ್ಪಂದವನ್ನು ನವದೆಹಲಿ ಉಲ್ಲಂಘಿಸಿದ್ದಲ್ಲದೆ ಭಾರತ ಅಕ್ರಮವಾಗಿ ಚೀನಾ ಗಡಿ ಪ್ರವೇಶಿಸುವ ಮೂಲಕ ಅಂತರಾಷ್ಟ್ರೀಯ ಗಡಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಶುವಾಂಗ್ ಆರೋಪಿಸಿದ್ದಾರೆ.
ಒಂದೆಡೆ ಉಭಯ ದೇಶಗಳ ನಡುವೆ ವಾಕ್ಸಮರ ಮುಂದುವರೆಯುತ್ದಿದ್ದರೆ, ಮತ್ತೊಂದೆಡೆ ಉಭಯ ದೇಶಗಳು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸದೇ ಹೋದರೆ ಯುದ್ಧ ನಡೆಯುವುದು ಖಚಿತ ಎಂದು ಚೀನಾ ತಜ್ಞರು ಎಚ್ಚರಿಕೆ ನೀಡಿದ್ದಾರೆ.
1962ರ ಯುದ್ಧದಲ್ಲಿ ಭಾರತದ 4383 ಯೋಧರು ಹಾಗೂ ಚೀನಾದ 722 ಯೋಧರು ಮೃತಪಟ್ಟಿದ್ದರು. ಎರಡೂ ದೇಶಗಳು ಪರಸ್ಪರ ಮಾತುಕತೆಗೆ ಮುಂದಾಗಬೇಕು ಎಂದು ತಜ್ಞರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


