ಲಡಾಕ್ ನಲ್ಲಿ ಟಿಬೇಟ್ ಧ್ವಜಾರೋಹಣ: ಚೀನಾದಿಂದ ತೀವ್ರ ಪ್ರತಿಭಟನೆ

Published On :
ಬೀಜಿಂಗ್: ಟಿಬೇಟ್ ನ ಗಡಿಪಾರಾಗಿರುವ ಸರ್ಕಾರ ಭಾರತದಲ್ಲಿ ಟಿಬೇಟ್ ರಾಷ್ಟ್ರದ ಧ್ವಜಾರೋಹಣ ಮಾಡಿರುವುದು ಚೀನಾ ಕೆಂಗಣ್ಣಿಗೆ ಗುರಿಯಾಗಿದ್ದು, ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.
ಭಾರತ-ಚೀನಾ ಪ್ರದೇಶದ ಎಲ್ಒಸಿ ಅಂದರೆ ವಾಸ್ತವ ಗಡಿ ರೇಖೆಯಲ್ಲಿ ಟಿಬೇಟ್ ನ ಗಡಿಪಾರಾಗಿರುವ ಸರ್ಕಾರ ಟಿಬೇಟ್ ನ ರಾಷ್ಟ್ರಧ್ವಜವನ್ನು ಹಾರಿಸಿದ್ದು, ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಭಾರತ-ಚೀನಾ ನಡುವೆ ಗಡಿ ಸಮಸ್ಯೆ ಎದುರಾಗಿರುವಾಗಲೇ ಟಿಬೆಟ್ ನ ಸರ್ಕಾರದ ನಡೆ ವಿರುದ್ಧ ಚೀನಾ ಮಾಧ್ಯಮ ಕಿಡಿ ಕಾರಿದ್ದು, ಟಿಬೇಟ್ ನ ಪ್ರತ್ಯೇಕತಾವಾದಿಗಳಿಗೆ ಧ್ವಜಾರೋಹಣ ಮಾಡಲು ಭಾರತದ ಅಧಿಕಾರಿಗಳೇ ಪ್ರಚೋದನೆ ನೀಡಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ನಲ್ಲಿ ಪ್ರಕಟವಾಗಿರುವ ಲೇಖನದ ಲೇಖಕ ಯು-ನಿಂಗ್ ಆರೋಪಿಸಿದ್ದಾರೆ.
ಭಾರತ ಸರ್ಕಾರ ಚೀನಾದೊಂದಿಗಿನ ರಾಜತಾಂತ್ರಿಕತೆಯಲ್ಲಿ ಟಿಬೇಟ್ ಕಾರ್ಡ್ ನ್ನು ಹಿಂದಿನಿಂದಲೂ ಪ್ರಯೋಗಿಸಿಕೊಂಡು ಬಂದಿದೆ. ಚೀನಾ ಮೇಲೆ ಒತ್ತಡ ಹೇರುವ ಭಾಗವಾಗಿ ಭಾರತದ ಅಧಿಕಾರಿಗಳು ಟಿಬೇಟ್ ನ ಪ್ರತ್ಯೇಕತಾವಾದಿಗಳಿಗೆ ಧ್ವಜಾರೋಹಣ ಮಾಡಲು ಪ್ರಚೋದನೆ ನೀಡಿರುವ ಸಾಧ್ಯತೆ ಇದೆ. ಆದರೆ ಭಾರತ ಸರ್ಕಾರ ಇದನ್ನು ಬೆಂಬಲಿಸುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


