ಅಫ್ಘಾನಿಸ್ತಾನದಲ್ಲಿದ್ದ ಲಾಡೆನ್ ಅಡಗುತಾಣ ಇಸಿಸ್ ವಶಕ್ಕೆ

ಅಮೆರಿಕ ಸೇನಾ ಪಡೆಗಳ ಬೇಟೆಯಿಂದ ಪಾರಾಗುವ ಸಲುವಾಗಿ ಅಫ್ಘಾನಿಸ್ತಾನದ ಟೋರಾಬೋರಾ ಪರ್ವತ ಶ್ರೇಣಿಯಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ಸ್ಥಾಪಕ ಒಸಾಮಾ ಬಿನ್ ಲಾಡೆನ್ ಮಾಡಿಕೊಂಡಿದ್ದ ಅಡಗುತಾಣವನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಕಾಬೂಲ್: ಅಮೆರಿಕ ಸೇನಾ ಪಡೆಗಳ ಬೇಟೆಯಿಂದ ಪಾರಾಗುವ ಸಲುವಾಗಿ ಅಫ್ಘಾನಿಸ್ತಾನದ ಟೋರಾಬೋರಾ ಪರ್ವತ ಶ್ರೇಣಿಯಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ಸ್ಥಾಪಕ ಒಸಾಮಾ ಬಿನ್ ಲಾಡೆನ್ ಮಾಡಿಕೊಂಡಿದ್ದ ಅಡಗುತಾಣವನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಇಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ.
ಪರ್ವತಶ್ರೇಣಿಯ ಮೇಲೆ ಇಸಿಸ್ ಉಗ್ರ ಸಂಘಟನೆಯ ಕಪ್ಪು ಧ್ವಜವನ್ನು ಹಾರಿಸಲಾಗುತ್ತಿದೆ ಎಂದು ತನ್ನ ರೇಡಿಯೋ ವಾಹನಿ ಖಿಲಾಫತ್ ನಲ್ಲಿ ಇಸಿಸ್ ಸಂಘಟನೆ ಘೋಷಿಸಿಕೊಂಡಿದೆ. ಅಲ್ಲದೆ, ಹಲವಾರ ಜಿಲ್ಲೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ಇಸಿಸ್, ವಲಸೆ ಹೋಗಿರುವ ಜನರು ಮರಳಿ ಬಂದು ತಮ್ಮ ಮನೆಯೊಳಗೆ ಇರಬೇಕೆಂದು ತಾಕೀತು ಮಾಡಿದೆ ಎಂದು ತಿಳಿದುಬಂದಿದೆ. 
ಇಸಿಸ್ ಉಗ್ರ ಸಂಘಟನೆ ಟೋರಾಬೋರಾ ಪ್ರದೇಶವನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಪಚೆರ್ ಅಗಂನಲ್ಲಿರುವ ಭದ್ರತಾಧಿಕಾರಿಗಳು ದೃಢಪಡಿಸಿದ್ದಾರೆ. ಟೋರಾಬೋರಾ ಪ್ರದೇಶದ ಬಳಿ ಇಸಿಸ್ ಉಗ್ರರು ಇದ್ದು ಸ್ಥಳದಲ್ಲಿ ತಾಲಿಬಾನ್ ಉಗ್ರರು ಹಾಗೂ ಇಸಿಸ್ ಉಗ್ರ ಸಂಘಟನೆ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಹೇಳಿದ್ದಾರೆ. 
ವಿಶ್ವ ವಾಣಿಜ್ಯ ಗೋಪುರದ ಮೇಲಿದನ ಉಗ್ರ ದಾಳಿ ಹಿನ್ನಲೆಯಲ್ಲಿ 2001ರಲ್ಲಿ ತಾಲಿಬಾನ್ ವಿರುದ್ದ ಅಮೆರಿಕ ಸೇನಾ ದಾಳಿ ಆರಂಭಿಸಿತ್ತು. ಈ ವೇಳೆ ತಾಬಿಬಾನ್ ರಕ್ಷಣೆಯಲ್ಲಿದ್ದ ಲಾಡೆನ್ ಕಾಬೂಲ್ ತೊರೆದು ಅಫ್ಗಾನಿಸ್ತಾನದ ಟೋರಾಬೋರಾ ಅಡಗುತಾಣದಲ್ಲಿ ಅವಿತುಕೊಂಡಿದ್ದ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com