6 ರಾಷ್ಟ್ರಗಳ ಅಮೆರಿಕ ಪ್ರವೇಶ ತಾತ್ಕಾಲಿಕ ನಿಷೇಧ, ವಲಸೆ ವಿರೋಧಿ ನೀತಿಗೆ ಟ್ರಂಪ್ ಮತ್ತೆ ಸಹಿ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ವಲಸೆ ವಿರೋಧಿ ನೀತಿಗೆ ಸಹಿ ಹಾಕಿದ್ದು, ಈ ಬಾರಿ ಮುಸ್ಲಿಂ ಪ್ರಾಬಲ್ಯವಿರುವ 6 ರಾಷ್ಟ್ರಗಳ ಪ್ರಜೆಗಳ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ವಲಸೆ ವಿರೋಧಿ ನೀತಿಗೆ ಸಹಿ ಹಾಕಿದ್ದು, ಈ ಬಾರಿ ಮುಸ್ಲಿಂ ಪ್ರಾಬಲ್ಯವಿರುವ 6 ರಾಷ್ಟ್ರಗಳ ಪ್ರಜೆಗಳ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.

ಸುಡಾನ್, ಸಿರಿಯಾ, ಇರಾನ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮೆನ್ ರಾಷ್ಟ್ರಗಳ ಪ್ರಜೆಗಳಿಗೆ ಹೊಸ ವೀಸಾ ನೀಡುವುದಕ್ಕೆ ನಿರ್ಬಂಧ ಹೇರಲಾಗಿದ್ದು, ಅಂತೆಯೇ ಅಮೆರಿಕದ ನಿರಾಶ್ರಿತರ ಕಾರ್ಯಕ್ರಮವನ್ನೂ ಕೂಡ 120  ದಿನಗಳವರೆಗೆ ನಿಷೇಧಿಸಲಾಗಿದೆ. ಇದೇ ಮಾರ್ಚ್ 16ರಿಂದ ನೂತನ ವಲಸೆ ನೀತಿ ಜಾರಿಗೆ ಬರಲಿದ್ದು, ನೂತನ ನೀತಿಯ ಅನ್ವಯ ಸುಡಾನ್, ಸಿರಿಯಾ, ಇರಾನ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮೆನ್ ರಾಷ್ಟ್ರಗಳ ಪ್ರಜೆಗಳ  ವೀಸಾಗೆ ನಿರ್ಬಂಧ ಹೇರಲಾಗಿದೆ. ಇನ್ನು ಈ ಪಟ್ಟಿಯಿಂದ ಇರಾಕ್ ಗೆ ವಿನಾಯಿತಿ ನೀಡಲಾಗಿದೆ.

ಇನ್ನು ಪ್ರಸ್ತುತ ಹೇರಲಾಗಿರುವ 90 ದಿನಗಳ ನಿಷೇಧವು ಈಗಾಗಲೇ ಅಧಿಕೃತ ವೀಸಾಗಳನ್ನು ಹೊಂದಿರುವವರಿಗೆ ಅನ್ವಯಿಸುವುದಿಲ್ಲ ಎಂದೂ ಪರಿಷ್ಕೃತ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. 2017 ಜನವರಿ 27ರ ಸಂಜೆ ಐದು  ಗಂಟೆಗೂ ಮೊದಲು ಅಧಿಕೃತ ವೀಸಾ ಹೊಂದಿದ್ದ ಅಥವಾ ಕಾರ್ಯಕಾರಿ ಆದೇಶದ ಪರಿಣಾಮಕಾರಿ ದಿನಾಂಕದಂದು ಅಧಿಕೃತ ವೀಸಾ ಹೊಂದಿರುವ ಯಾವುದೇ ವ್ಯಕ್ತಿಗೆ ಅಮೆರಿಕ ಪ್ರವೇಶ ನಿಷೇಧವು ಅನ್ವಯಿಸುವುದಿಲ್ಲ ಎಂದು  ಆದೇಶದಲ್ಲಿ ತಿಳಿಸಲಾಗಿದೆ.

ಅಮೆರಿಕ ಭದ್ರತೆ ನಿಟ್ಟಿನಲ್ಲಿ ಟ್ರಂಪ್ ನಿರ್ಧಾರ ಪ್ರಮುಖವಾದದ್ದು
ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ವಿರೋಧಿ ನೀತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ ರ್ಸನ್, ದೇಶದ ಭದ್ರತೆ ವಿಚಾರವಾಗಿ ಟ್ರಂಪ್ ತೆಗೆದುಕೊಳ್ಳುತ್ತಿರುವ  ನಿರ್ಧಾರಗಳು ಪ್ರಮುಖವಾದದ್ದು ಎಂದು ಹೇಳುವ ಮೂಲಕ ಟ್ರಂಪ್ ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಪ್ರಸ್ತುತ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ತಾತ್ಕಾಲಿಕವೇ ಆದರೂ ಭವಿಷ್ಯದಲ್ಲಿ ಸುಧೀರ್ಘ ಲಾಭವಾಗಲಿದೆ  ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com