ಅಮೆರಿಕದಲ್ಲಿ ಭಾರತ ಮೂಲದ ದಂಪತಿ ಕೊಲೆ: ಪುತ್ರಿಯ ಮಾಜಿ ಪ್ರಿಯಕರನಿಂದಲೇ ಕೃತ್ಯ!

ಭಾರತ ಮೂಲದ ದಂಪತಿಯನ್ನು ಪುತ್ರಿಯ ಮಾಜಿ ಪ್ರಿಯಕರನೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಹತ್ಯೆಯಾದ ಭಾರತ ಮೂಲದ ಟೆಕ್ಕಿ ನರೇನ್ ಪ್ರಭು (ಫೇಸ್ ಬುಕ್ ಚಿತ್ರ)
ಹತ್ಯೆಯಾದ ಭಾರತ ಮೂಲದ ಟೆಕ್ಕಿ ನರೇನ್ ಪ್ರಭು (ಫೇಸ್ ಬುಕ್ ಚಿತ್ರ)
Updated on: 

ಸ್ಯಾನ್ ಫ್ರ್ನಾನ್ಸಿಸ್ಕೋ: ಭಾರತ ಮೂಲದ ದಂಪತಿಯನ್ನು ಪುತ್ರಿಯ ಮಾಜಿ ಪ್ರಿಯಕರನೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಸಿಲಿಕಾನ್ ವ್ಯಾಲಿ ಟೆಕ್ ಎಕ್ಸಿಕ್ಯೂಟಿವ್ ನರೇನ್ ಪ್ರಭು ಹಾಗೂ ಅವರ ಪತ್ನಿ ಅವರೇ ಕೊಲೆಯಾದ ದುರ್ಧೈವಿಗಳಾಗಿದ್ದು, ಅಮೆರಿಕದ ಸ್ಯಾನ್ ಫ್ರ್ನಾನ್ಸಿಸ್ಕೋ ಸ್ಯಾನ್ ಜೋಸ್ ನಲ್ಲಿರುವ ಅವರ ನಿವಾಸದಲ್ಲಿ ಈ ದುರ್ಘಟನೆ  ಸಂಭವಿಸಿದೆ. ಪೊಲೀಸ್ ಮೂಲಗಳು ತಿಳಿಸಿರುವಂತೆ ದಂಪತಿ ಪುತ್ರಿಯ ಮಾಜಿ ಪ್ರಿಯತಮ 24 ವರ್ಷದ ಮಿರ್ಜಾ ಟಟ್ಲಿಕ್ ಎಂಬಾತನೇ ಈ ಕೃತ್ಯವೆಸಗಿದ್ದು, ಈ ಸಂದರ್ಭದಲ್ಲಿ ದಂಪತಿಯ ಪುತ್ರಿ ಮನೆಯಲ್ಲಿರಲಿಲ್ಲ ಎಂದು  ಹೇಳಿದ್ದಾರೆ.

ನರೇನ್ ಪ್ರಭು ಅವರ ಪುತ್ರಿ ಬೇರೊಂದು ಪ್ರದೇಶದಲ್ಲಿ ನೆಲೆಸಿದ್ದು, ವರ್ಷಗಳ ಹಿಂದಷ್ಟೇ ಇವರಿಬ್ಬರ ಸಂಬಂಧ ಮುರಿದುಬಿದ್ದಿತ್ತಂತೆ. ಇನ್ನು ಆರೋಪಿ ಮಿರ್ಜಾ ಟಟ್ಲಿಕ್ ವಿರುದ್ಧ ಹಲವು ಆರೋಪಗಳಿದ್ದು, ಈ ಹಿಂದೆ ಸಾಕಷ್ಟು ಬಾರಿ  ಗೃಹ ಹಿಂಸಾಚಾರ ಪ್ರಕರಣದಡಿಯಲ್ಲಿ ಈತನ ವಿರುದ್ಧ ದೂರು ದಾಖಲಾಗಿತ್ತು ಎಂದು ಸ್ಯಾನ್ ಜೋಸ್ ಪೊಲೀಸ್ ವರಿಷ್ಠಾಧಿಕಾರಿ ಎಡ್ಡಿ ಗಾರ್ಸಿಯಾ ತಿಳಿಸಿದ್ದಾರೆ. ಘಟನಾ ಸಂದರ್ಭದಲ್ಲಿ ಪ್ರಭು ಅವರ 20 ವರ್|ದ ಪುತ್ರ ಮನೆಯಲ್ಲೇ  ಇದ್ದು ಅವರೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.

ಇನ್ನು ಇದೇ ಮನೆಯಲ್ಲೇ ಆರೋಪಿ ಮಿರ್ಜಾ ಟಟ್ಲಿಕ್ ಕೂಡ ಇದ್ದ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ವಾಟ್ ತಂಡವನ್ನು ಮನೆಗೆ ಕರೆಸಿದ್ದಾರೆ. ಈ ವೇಳೆ ಆತ ಶರಣಾಗತಿಗೆ ನಿರಾಕರಿಸಿದ್ದು, ಈವೇಳೆ 13 ವರ್ಷದ ಬಾಲಕನನ್ನು  ಒತ್ತೆಯಾಳಾಗಿರಿಸಿಕೊಂಡಿದ್ದ. ಬಳಿಕ ಪೊಲೀಸ್ ಅಧಿಕಾರಿಗಳ ಸಂಧಾನದ ಮೇರೆಗೆ ಆರೋಪಿ ಬಾಲಕನನ್ನು ಬಿಟ್ಟು ಕಳುಹಿಸಿದ್ದ. ಈ ವೇಳೆ ಅಧಿಕಾರಿಗಳು ಆರೋಪಿ ಇದ್ದ ಕೋಣೆಗೆ ನುಗ್ಗಿದ್ದ ಸಂದರ್ಭದಲ್ಲಿ ಆತನ ಶವ ಪತ್ತೆಯಾಗಿತ್ತು  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com