ಯುದ್ಧದಲ್ಲಿ ಹೋರಾಡಿ ಗೆಲ್ಲಲು ಸಿದ್ಧವಾಗಿರಿ, ಚೀನಾ ಸೇನೆಗೆ ಕ್ಸೀ ಜಿನ್ ಪಿಂಗ್ ಕರೆ

ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಚೀನಾ ಸೇನೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ.
ಕ್ಸೀ ಜಿನ್ ಪಿಂಗ್
ಕ್ಸೀ ಜಿನ್ ಪಿಂಗ್
ಬೀಜಿಂಗ್: ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಚೀನಾ ಸೇನೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ.  
ಹೋರಾಟದ ಸಾಮರ್ಥ್ಯವನ್ನು ಸುಧಾರಣೆ ಮಾಡಿಕೊಳ್ಳುವಂತೆ ಹಾಗೂ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ. ಚೀನಾದ ಕೇಂದ್ರೀಯ ಮಿಲಿಟರಿ ಕಮಿಷನ್ (ಸಿಎಂಸಿ)ಯ ತಪಾಸಣೆ ನಡೆಸಿದ ಬಳಿಕ ಯೋಧರನ್ನುದ್ದೇಶಿಸಿ ಮಾತನಾಡಿರುವ ಕ್ಸೀ ಜಿನ್ ಪಿಂಗ್, ಸೇನಾ ಯೋಧರನ್ನು ಯುದ್ಧ ಗೆಲ್ಲುವ ಹಾಗೂ ಹೋರಾಟಕ್ಕೆ ಸಿಎಂಸಿ ಮುನ್ನಡೆಸಬೇಕು ಎಂದು ಹೇಳಿದ್ದಾರೆ. 
ಕಮ್ಯುನಿಷ್ಟ್ ಪಾರ್ಟಿ ಆಫ್ ಚೀನಾದ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ ಕ್ಸೀ ಜಿನ್ ಪಿಂಗ್ ಚೀನಾ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಯೋಧರಿಗೆ 2 ಬಾರಿ ಕರೆ ನೀಡಿದ್ದು ಈಗ ಮಹತ್ವ ಪಡೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com