ನ್ಯೂಯಾರ್ಕ್: ಟ್ರಂಪ್ ಟವರ್ ನಲ್ಲಿ ಅಗ್ನಿ ಅವಘಡ, ಓರ್ವ ಸಾವು, 4 ಜನರಿಗೆ ಗಾಯ
ನ್ಯೂಯಾರ್ಕ್: ಟ್ರಂಪ್ ಟವರ್ ನಲ್ಲಿ ಅಗ್ನಿ ಅವಘಡ, ಓರ್ವ ಸಾವು, 4 ಜನರಿಗೆ ಗಾಯ

ನ್ಯೂಯಾರ್ಕ್: ಟ್ರಂಪ್ ಟವರ್ ನಲ್ಲಿ ಅಗ್ನಿ ಅವಘಡ, ಓರ್ವ ಸಾವು, 4 ಜನರಿಗೆ ಗಾಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡೆತನದ ಟ್ರಂಪ್ ಟವರ್'ನ 50ನೇ ಮಹಡಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಐವರಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ...
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡೆತನದ ಟ್ರಂಪ್ ಟವರ್'ನ 50ನೇ ಮಹಡಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ, ನಾಲ್ವರಿಗೆ ಗಾಯವಾಗದಿರುವ ಘಟನೆ ಭಾನುವಾರ ನಡೆದಿದೆ. 
ಕಟ್ಟಡದ 50ನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಬೆಂಕಿಯ ಕೆನ್ನಾಲಿಗೆ ಇತರೆ ಮಹಡಿಗಳಿಗೂ ಹಬ್ಬುತ್ತಿತ್ತು. ಕಟ್ಟಡ ಇತರೆ ಮಹಡಿಗಳಲ್ಲೂ ಹೊಗೆಯಾಡುತ್ತಿತ್ತು. ಇದರಿಂದ ಕಾರ್ಯಾಚರಣೆಗೆ ಭಾರೀ ಸಮಸ್ಯೆಗಳು ಎದುರಾಗಿತ್ತು ಎಂದು ನ್ಯೂಯಾರ್ಕ್ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. 
ಘಟನೆಯಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ. ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಐವರಿಗೆ ಗಾಯಗಳಾಗಿದ್ದು, ಐವರಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೋರ್ವ ವ್ಯಕ್ತಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿತ್ತು. ಇದೀಗ ವ್ಯಕ್ತಿ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. 
ಪ್ರಸ್ತುತ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದಿದ್ದಾರೆ. 
ಟ್ರಂಪ್ ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡ ಇದೀಗ ನಿಯಂತ್ರಣಕ್ಕೆ ಬಂದಿದೆ. ಅತ್ಯುತ್ತಮವಾಗಿ ಕಟ್ಟಿದ್ದ ಕಟ್ಟಡವದು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಧನ್ಯವಾದಗಳು ಎಂದು ಟ್ರಂಪ್ ಅವರು ಘಟನೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com