ಬೆಲೆ ಕಟ್ಟಲಾಗದ ರಾಜ ಮನೆತನದ ಕಿರೀಟಗಳನ್ನು ಕದ್ದು ಸ್ಪೀಡ್ ಬೋಟ್‍ನಲ್ಲಿ ಕಳ್ಳರು ಪರಾರಿ!

ಸ್ವಿಡನ್ ನಲ್ಲಿ ಕಳ್ಳರಿಬ್ಬರು ಬೆಲೆ ಕಟ್ಟಲಾಗದ ರಾಜ ಮನೆತನದ ಎರಡು ಕಿರೀಟಗಳನ್ನು ಕದ್ದು ಪರಾರಿಯಾಗಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಸ್ಟೋಕ್ಲಾಂ: ಸ್ವಿಡನ್ ನಲ್ಲಿ ಕಳ್ಳರಿಬ್ಬರು ಬೆಲೆ ಕಟ್ಟಲಾಗದ ರಾಜ ಮನೆತನದ ಎರಡು ಕಿರೀಟಗಳನ್ನು ಕದ್ದು ಪರಾರಿಯಾಗಿದ್ದಾರೆ. 
ಸ್ಟೋಕ್ಲಾಂನಿಂದ 60 ಕಿ.ಮೀ ದೂರದಲ್ಲಿರುವ ಮಧ್ಯಕಾಲೀನ ಕ್ಯಾಥೆಡ್ರಲ್ ನಲ್ಲಿ 9ನೇ ರಾಜ ಕಾರ್ಲ್ ಮತ್ತು ರಾಣಿ ಕ್ರಿಸ್ಟಿನಾ ಧರಿಸುತ್ತಿದ್ದ ಕಿರೀಟಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಎಂದಿನಂತೆ ಜನರು ಮ್ಯೂಜಿಯಂನಲ್ಲಿ ಇದ್ದಾಗಲೇ ಕಳ್ಳರಿಬ್ಬರು ಕಿರೀಟಗಳನ್ನು ಕದ್ದು ಸ್ಪೀಡ್ ಬೋಟ್ ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ಸದ್ಯ ದೇಶಾದ್ಯಂತ ಅಲರ್ಟ್ ಘೋಷಿಸಲಾಗಿದ್ದು ಕಳ್ಳರ ಬೇಟೆಗೆ ಪೊಲೀಸರು ರೆಡಿಯಾಗಿದ್ದಾರೆ. 
ಕಳವಾಗಿರುವ ಕಿರೀಟಗಳನ್ನು ಚಿನ್ನಾ, ಹರಳು ಮತ್ತು ಮುತ್ತುಗಳಿಂದ ಮಾಡಲಾಗಿದೆ. ಸದ್ಯ ಈ ಕಿರೀಟಗಳ ಮೌಲ್ಯದ ಬಗ್ಗೆ ವರದಿಯಾಗಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com