ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ದೇಶಗಳ ನಡುವಿನ ಬಾಂಧವ್ಯ ಸುಧಾರಣೆಗೊಳ್ಳಲು ಕ್ರಿಕೆಟ್ನಿಂದ ಮಾತ್ರ ಸಾಧ್ಯ ಎಂದು ಪಾಕ್ ಮಾಜಿ ಆಟಗಾರ ಶಾಹಿದ್ ಆಫ್ರಿದಿ ಹೇಳಿದ್ದಾರೆ.
ಇತ್ತೀಚೆಗೆ ಸ್ವಿಜರ್ಲ್ಯಾಂಡ್ ನಲ್ಲಿ ನಡೆದ ಸೇಂಟ್ ಮಾರಿಚ್ ಐಸ್ ಕ್ರಿಕೆಟ್ ಸಂದರ್ಭದ ಆತ್ಮೀಯ ಕ್ಷಣಗಳನ್ನು ಮೆಲುಕು ಹಾಕಿದ ಆಫ್ರಿದಿ, ಪಾಕಿಸ್ತಾನ ಮತ್ತು ಭಾರತ ನಡುವಿನ ಅಂತಾರಾಷ್ಟ್ರೀಯ ಪಂದ್ಯಗಳ ಕೊರತೆಯ ಕಾರಣ ನಾವು ಐಸ್ ಕ್ರಿಕೆಟ್ ನಲ್ಲಿ ಪಾಲ್ಗೊಂಡು ಸಂಭ್ರಮಿಸಿದೆವು.
ರಾಜಕೀಯ ವಿಚಾರಗಳನ್ನು ಬದಿಗಿಟ್ಟು ಎರಡೂ ತಂಡಗಳ ಮಧ್ಯೆ ಕ್ರಿಕೆಟ್ ಆಟಕ್ಕೆ ಅನುವು ನೀಡಿದರೆ ಭಾರತ-ಪಾಕ್ ನಡುವಿನ ಬಿಗುವಿನ ಸ್ಥಿತಿ ನಿವಾರಣೆಯಾಗುತ್ತದೆ ಎಂದು ಹೇಳಿದರು.