ವಿದೇಶ

ಸಿಪಿಇಸಿ ವಿವಾದ: ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧ :ಚೀನಾ

ಸಿಪಿಇಸಿ ವಿವಾದ: ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧ :ಚೀನಾ
ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಹ್ಯು-ಚುಂಯಿಂಗ್ ಚಿತ್ರ
Published On :

ಬೀಜಿಂಗ್ :ಚೀನಾ-ಪಾಕಿಸ್ತಾನ ನಡುವಿನ ವಿವಾದಾತ್ಮಕ ಆರ್ಥಿಕ ಕಾರಿಡಾರ್ ಯೋಜನೆ  ಸಂಬಂಧ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ ಹ್ಯು-ಚುಂಯಿಂಗ್ ಹೇಳಿದ್ದಾರೆ.

 ಪಾಕಿಸ್ತಾನ, ಚೀನಾ ಆರ್ಥಿಕ ಕಾರಿಡಾರ್ ಸಂಬಂಧ ಭಾರತೀಯ ರಾಯಬಾರಿ ಗೌತಮ್ ಬಾಂಬಾವಾಲೆ ಇತ್ತೀಚಿಗೆ ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ಬೆನ್ನಲ್ಲೇ ಹ್ಯು-ಚುಂಯಿಂಗ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಉಭಯ ದೇಶಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು  ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ದವಿರುವುದಾಗಿ  ಅವರು ಹೇಳಿದ್ದಾರೆ.

ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್  ಆರ್ಥಿಕ ಸಹಕಾರದ ಯೋಜನೆಯಾಗಿದ್ದು,
ಮೂರನೇ ರಾಷ್ಟ್ರವನ್ನು ಗುರಿಯಾಗಿಸುವ ಯಾವುದೇ ಉದ್ದೇಶವಿಲ್ಲಾ. ಪರಸ್ಪರ ಗೌರವ ಹಾಗೂ ನಂಬಿಕೆ ಆಧಾರದ ಮೇಲೆ ಉಭಯ ದೇಶಗಳು ಬಗೆಹರಿಸಿಕೊಳ್ಳಬೇಕು,ಈ ನಿಟ್ಟಿನಲ್ಲಿ ತಾವೂ ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ

ಸುಮಾರು 50 ಬಿಲಿಯನ್ ಡಾಲರ್ ಮೊತ್ತದ ಈ ಕಾರಿಡಾರ್ ಯೋಜನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ  ಚೀನಾ ಸಂಪರ್ಕಿಸುವುದರಿಂದ ಭಾರತ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.