ಮೌಲಿನ್ ರಾಥೋಡ್(25) ಮೃತ ದುರ್ದೈವಿ ಆಗಿದ್ದು, ಆತ ಯುವತಿಯೊಬ್ಬಳ ಮನೆಯ ಎದುರು ತೀವ್ರವಾಗಿ ಗಾಯಗೊಂಡ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತನನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಸಹ ಆತ ಬದುಕುಳಿಯಲಿಲ್ಲ. ಹಲ್ಲೆಗೊಳಗಾಗುವುದಕ್ಕೂ ಮುನ್ನ ರಾಥೋಡ್ ಮೆಲ್ಬೋರ್ನ್ ನಲ್ಲಿರುವ 19 ವರ್ಷದ ಯುವತಿಯ ಮನೆಗೆ ತೆರಳಿದ್ದ. ಘಟನೆಗೆ ಸಂಬಂಧಿಸಿದಂತೆ ಯುವತಿಯನ್ನು ಬಂಧಿಸಲಾಗಿದ್ದು, ವಿಚಾರಾಣೆ ನಡೆಸಲಾಗುತ್ತಿದೆ.