ಆರ್ಟಿಕಲ್ 370 ರದ್ದು ಬೆನ್ನಲ್ಲೇ ಪಾಕ್ ತತ್ತರ; ಆವೇಶದಲ್ಲಿ ಕೈ ಸುಟ್ಟಿಕೊಂಡ ಇಮ್ರಾನ್ ಕಕ್ಕಾಬಿಕ್ಕಿ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂದು ದಿಟ್ಟ ನಿರ್ಧಾರ ಪಾಕಿಸ್ತಾನಕ್ಕೆ ಬೆನ್ನು ಮೂಳೆ ಮುರಿದಂತಾಗಿದೆ. ಹೌದು ಆರ್ಟಿಕಲ್ 370 ರದ್ದು...
ಇಮ್ರಾನ್ ಖಾನ್, ನರೇಂದ್ರ ಮೋದಿ
ಇಮ್ರಾನ್ ಖಾನ್, ನರೇಂದ್ರ ಮೋದಿ
ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂದು ದಿಟ್ಟ ನಿರ್ಧಾರ ಪಾಕಿಸ್ತಾನಕ್ಕೆ ಬೆನ್ನು ಮೂಳೆ ಮುರಿದಂತಾಗಿದೆ. ಹೌದು ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಪಾಕಿಸ್ತಾನ ತಲ್ಲಣಿಸಿ ಹೋಗಿದ್ದು ಸೆನ್ಸೆಕ್ಸ್ ಪ್ರಪಾತಕ್ಕೆ ಕುಸಿದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧ ಸಿಡಿದೆದ್ದು ಪಾಕ್ ಉಗ್ರತ್ವವನ್ನು ಪೋಷಿಸುತ್ತಿದೆ ಎಂದು ಹೇಳುತ್ತಾ ಬಂದಿದ್ದರಿಂದ ವಿದೇಶಗಳಿಂದ ಪಾಕ್ ಗೆ ಬರಬೇಕಾಗಿದ್ದ ಅನುದಾನ ಕಡಿಮೆಯಾಗಿದ್ದು ಆರ್ಥಿಕ ಒಡೆತಕ್ಕೆ ಸಿಕ್ಕಿತ್ತು. 
ಮೊದಲೇ ಆರ್ಥಿಕವಾಗಿ ದಿವಾಳಿಯಾಗಿದ್ದ ಪಾಕಿಸ್ತಾನ ಇದೀಗ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370ಯನ್ನು ಕಿತ್ತು ಹಾಕಿರುವುದಕ್ಕೆ ಭಾರತದೊಂದಿಗಿನ ರಾಜತಾಂತ್ರಿಕ ವ್ಯವಹಾರಗಳನ್ನು ರದ್ದು ಮಾಡಿದ್ದರಿಂದ ಪಾಕ್ ಮಾರುಕಟ್ಟೆಗೆ ಹೊಡೆತ ಬಿದ್ದಿದೆ. ಷೇರು ಮಾರುಕಟ್ಟೆಯಲ್ಲಿ 800 ಅಂಕಗಳ ದಾಖಲೆ ಕುಸಿತ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com