ಇಂದು ಚೀನಾದ ವೂಹನ್ ನಲ್ಲಿ 16 ನೇ ರಷ್ಯಾ-ಭಾರತ-ಚೀನಾ (ಆರ್ಐಸಿ) ವಿದೇಶಾಂಗ ವ್ಯವಹಾರಗಳ ಸಚಿವರ ಸಭೆ ನಡೆದಿತ್ತು. ಈ ವೇಳೆ ಭಾರತ, ಪಾಕಿಸ್ತಾನ ಉಗ್ರರ ಪೋಷಣೆ ಮಾಡುತ್ತಿರುವ ಬಗ್ಗೆ ಚೀನಾಗೆ ಮನವರಿಕೆ ಮಾಡಿಕೊಟ್ಟಿತ್ತು. ಸದಾ ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಟಕ್ಕೆ ಕೊಕ್ಕೆ ಹಾಕುತ್ತಿದೆ ಎಂದು ಆರೋಪಿಸಿತ್ತು. ನಂತರ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಮೂರು ರಾಷ್ಟ್ರಗಳು ಒಟ್ಟಿಗೆ ಹೋರಾಟ ನಡೆಸುವ ಬಗ್ಗೆ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದ್ದರು.